alex Certify ಈ ಬಣ್ಣದ ಚಹಾವನ್ನು ಕುಡಿಯುವ ಮುನ್ನ ಎಚ್ಚರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬಣ್ಣದ ಚಹಾವನ್ನು ಕುಡಿಯುವ ಮುನ್ನ ಎಚ್ಚರ….!

ಹೆಚ್ಚಿನ ಜನರು ತಮ್ಮ ದಿನವನ್ನು ಒಂದು ಕಪ್ ಚಹಾ ಕುಡಿಯುವ ಮೂಲಕ ಆರಂಭಿಸುತ್ತಾರೆ. ಚಹಾದಲ್ಲಿ ಹಲವಾರು ವಿಧಗಳಿವೆ. ಬ್ಲ್ಯಾಕ್ ಟೀ, ಹಾಲು ಮಿಶ್ರಿತ ಟೀ, ಶುಂಠಿ ಟೀ, ನಿಂಬೆ ಟೀ ಮುಂತಾದ ಹಲವಾರು ವಿಧದಲ್ಲಿ ಕಂಡು ಬರುತ್ತದೆ. ಇವು ಆರೋಗ್ಯಕ್ಕೆ ಉತ್ತಮ. ಆದರೆ ಚಹಾದ ಎಲೆಗಳಲ್ಲಿ ಕಲಬೆರಕೆ ಇದ್ದರೆ ಅದರಿಂದ ತಯಾರಿಸಿದ ಟೀ ಸೇವಿಸಿದರೆ ನೀವು ಅನಾರೋಗ್ಯಕ್ಕೊಳಗಾಗಬಹುದು. ಹಾಗಾಗಿ ಚಹಾ ತಯಾರಿಸುವಾಗ ಅದರ ಬಣ್ಣದ ಮೂಲಕ ಚಹಾದ ಪರಿಶುದ್ಧತೆ ತಿಳಿಯಿರಿ.

ಚಹಾದ ಗುಣಮಟ್ಟವನ್ನು ಅದರ ಎಲೆಗಳು, ಬಣ್ಣ ಮತ್ತು ಪರಿಮಳದಿಂದ ತಿಳಿಯಬಹುದು. ಆದರೆ ಕೆಲವೊಮ್ಮೆ ಎಲೆಗಳನ್ನು ತಯಾರಿಸುವಾಗ ಅದು ಹಾಳಾಗುತ್ತದೆ. ಆ ಸಮಯದಲ್ಲಿ ಅದರ ಗುಣಮಟ್ಟವನ್ನು ಹೆಚ್ಚಿಸಲು ಸಿಂಥೆಟಿಕ್ ಬಣ್ಣಗಳನ್ನು ಬಳಸುತ್ತಾರೆ. ಈ ಬಣ್ಣಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಲಿವರ್, ಹೃದಯ, ಕಿಡ್ನಿಗಳಂತಹ ಪ್ರಮುಖ ಅಂಗಗಳು ಹಾನಿಗೊಳಗಾಗುತ್ತವೆ. ಅಧಿಕ ರಕ್ತದೊತ್ತಡ, ಜೀರ್ಣಕ್ರಿಯೆಯಲ್ಲಿ ಸಮಸ್ಯೆ, ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗೆ ಕಾರಣವಾಗುತ್ತದೆ.

ಹಾಗಾಗಿ ಚಹಾ ತಯಾರಿಸುವಾಗ ಅದು ಗಾಢವಾದ ಕೆಂಪು ಅಥವಾ ಗೋಲ್ಡನ್ ಬಣ್ಣದಲ್ಲಿದ್ದರೆ ಆ ಚಹಾ ಉತ್ತಮ ಗುಣಮಟ್ಟದಾಗಿದೆ ಎಂಬುದನ್ನು ತಿಳಿಯಿರಿ. ಕುದಿಸಿದ ಚಹಾ ಗಾಢ ಕಂದು ಬಣ್ಣದಲ್ಲಿದ್ದರೆ ಅದು ಉತ್ತಮ ಗುಣಮಟ್ಟದ ಚಹಾ ಅಲ್ಲ ಎಂಬುದನ್ನು ತಿಳಿಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...