alex Certify ಈ ಫೋಟೋದಲ್ಲಿ ಅಡಗಿರುವ ಆನೆ ಗುರುತಿಸಲು ಶೇ.1ರಷ್ಟು ಜನರಿಗೆ ಮಾತ್ರ ಸಾಧ್ಯವಂತೆ; ನೀವು ಕಂಡುಹಿಡಿಯಿರಿ ನೋಡೋಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಫೋಟೋದಲ್ಲಿ ಅಡಗಿರುವ ಆನೆ ಗುರುತಿಸಲು ಶೇ.1ರಷ್ಟು ಜನರಿಗೆ ಮಾತ್ರ ಸಾಧ್ಯವಂತೆ; ನೀವು ಕಂಡುಹಿಡಿಯಿರಿ ನೋಡೋಣ

ಇತ್ತೀಚಿಗೆ, ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡುವ ಹಲವಾರು ಆಪ್ಟಿಕಲ್ ಭ್ರಮೆಗಳನ್ನು ನೀವು ನೋಡಿರಬಹುದು. ಒಗಟು ಅಥವಾ ಚಿತ್ರಕಲೆಯೊಳಗೆ ಅಡಗಿರುವ ಯಾವುದಾದರೂ ಆಪ್ಟಿಕಲ್ ಭ್ರಮೆಗಳು ಪರಿಹರಿಸಲು ವಿನೋದಮಯವಾಗಿರುತ್ತವೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ, ಅಡಗಿರುವ ಆನೆಯನ್ನು ಗುರುತಿಸುವಂತೆ ಸವಾಲು ಹಾಕಲಾಗಿದೆ. ದೈತ್ಯ ಆನೆಯನ್ನು ಹುಡುಕುವುದು ಸುಲಭ ಎಂದು ಬಹುಷಃ ನೀವು ಭಾವಿಸಿರಬಹುದು. ಆದರೆ, ಇದನ್ನು ಪರಿಹರಿಸಲು ಕೂಡ ಹಲವರು ತಲೆಕೆಡಿಸಿಕೊಂಡಿದ್ದಾರೆ.

ಟಿಕ್‌ಟಾಕ್ ಸ್ಟಾರ್ ಹೆಕ್ಟಿಕ್ ನಿಕ್ ಅವರು ಭ್ರಮೆಯನ್ನು ಪರಿಹರಿಸಲು ವೀಕ್ಷಕರಿಗೆ ಸವಾಲು ಹಾಕಿದ್ದಾರೆ. ಚಿತ್ರವನ್ನು ಪೋಸ್ಟ್ ಮಾಡುತ್ತಾ, ಈ ಚಿತ್ರದಲ್ಲಿ ಅಡಗಿರುವ ಆನೆಯನ್ನು ಕೇವಲ ಒಂದು ಶೇಕಡಾದಷ್ಟು ಜನರು ಮಾತ್ರ ಕಂಡುಹಿಡಿಯಬಹುದು ಎಂದು ಹೇಳಿದ್ದಾರೆ.

ಚಿತ್ರದತ್ತ ಎಷ್ಟೇ ಹೊತ್ತು ಕಣ್ಣು ಹಾಯಿಸಿದರೂ ಬಹುತೇಕರಿಗೆ ಆನೆ ಕಾಣಿಸದ ಕಾರಣ ವೀಕ್ಷಕರು ತಬ್ಬಿಬ್ಬಾಗಿದ್ದಾರೆ. ನಿಮಗೆ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ನಮ್ಮಲ್ಲಿ ಪರಿಹಾರವಿದೆ. ಎರಡು ದೊಡ್ಡ ಮರಗಳು ತನ್ನ ಕಾಲುಗಳಂತೆ ಮತ್ತು ಚಿಕ್ಕ ಮರವು ಸೊಂಡಿಲಾಗಿ ಇರುವುದನ್ನು ಸರಿಯಾಗಿ ಗಮನಿಸಿ. ಅದೇ ಈ ಚಿತ್ರದಲ್ಲಿರೋ ಆನೆಯಾಗಿದೆ. ಆನೆಯನ್ನು ಸ್ಪಷ್ಟವಾಗಿ ನೋಡಬೇಕೆಂದರೆ ನಿಮ್ಮ ಮೊಬೈಲ್ ಅನ್ನು ತಿರುಗಿಸಿ, ಚಿತ್ರವನ್ನು ಉಲ್ಟಾ ನೋಡಿ..

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...