ಹಾಲು ಸಂಪೂರ್ಣ ಆಹಾರ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಹಾಲು ನಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾದ ಪಾನೀಯ. ದೇಹದ ಶಕ್ತಿಯ ಮಟ್ಟವನ್ನು ಇದು ಕಾಯ್ದುಕೊಳ್ಳುತ್ತದೆ. ನಾವೆಲ್ಲರೂ ಸಾಮಾನ್ಯವಾಗಿ ಹಸು ಅಥವಾ ಎಮ್ಮೆಯ ಹಾಲನ್ನು ಬಳಸುತ್ತೇವೆ.
ಆದರೆ ಮೇಕೆಯ ಹಾಲು ಇದಕ್ಕಿಂತಲೂ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಡೈರಿ ಉತ್ಪನ್ನಗಳಲ್ಲಿ ಒಂದಾಗಿದೆ. ಹಸು ಅಥವಾ ಎಮ್ಮೆ ಸಾಕುವುದಕ್ಕಿಂತ ಮೇಕೆ ಸಾಕುವುದು ಸುಲಭ.
ಡೈರಿ ಉದ್ಯಮವು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿಯಾಗದ ದೇಶಗಳಲ್ಲಿ ಮೇಕೆ ಸಾಕಣೆ ಹೆಚ್ಚಾಗಿದೆ. ಇತರ ಯಾವುದೇ ಪ್ರಾಣಿಗಳನ್ನು ಸಾಕುವುದಕ್ಕಿಂತ ಕಡಿಮೆ ವೆಚ್ಚದಾಯಕವಾಗಿದೆ. ಆರೋಗ್ಯಕರ ಕ್ಯಾಲೋರಿಗಳು, ಪ್ರೋಟೀನ್ಗಳು ಮತ್ತು ಲಿಪಿಡ್‌ಗಳು ಮೇಕೆ ಹಾಲಿನಲ್ಲಿ ಕಂಡುಬರುತ್ತವೆ. ಹೆಚ್ಚಿನ ಜನರು ಹಸು ಮತ್ತು ಮೇಕೆ ಹಾಲನ್ನು ಆಯ್ಕೆ ಮಾಡುತ್ತಾರೆ. ಪ್ರಪಂಚದಾದ್ಯಂತ ಶೇ.65-72ರಷ್ಟು ಡೈರಿ ಗ್ರಾಹಕರು ಮೇಕೆ ಮತ್ತು ಹಸುವಿನ ಹಾಲನ್ನು ಬಳಸುತ್ತಾರೆ.
ಮೇಕೆ ಹಾಲಿನ ಪ್ರಯೋಜನಗಳು
ಹಸು ಮತ್ತು ಎಮ್ಮೆಗಳಿಗೆ ಹೋಲಿಸಿದರೆ ಮೇಕೆಯ ಹಾಲು ಸ್ವಲ್ಪ ವಿಭಿನ್ನ ದಪ್ಪ ಮತ್ತು ಕೆನೆ ಹೊಂದಿದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಇದು ಪರಿಣಾಮಕಾರಿಯಾಗಿದೆ. ಮೇಕೆ ಹಾಲು ಚರ್ಮದ ಅಲರ್ಜಿಯ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಹಾಲು ತ್ವಚೆಗೆ ಹೆಚ್ಚು ಪ್ರಯೋಜನಕಾರಿ ಎಂಬುದು ಅಧ್ಯಯನದಲ್ಲಿ ಬಹಿರಂಗವಾಗಿದೆ. ಮಾನವ ಚರ್ಮ ಮತ್ತು ಮೇಕೆ ಹಾಲಿನ pH ಸಮಾನವಾಗಿರುತ್ತದೆ.
ಗಂಭೀರ ಕಾಯಿಲೆಗಳನ್ನು ದೂರವಿಡುತ್ತದೆ
ಮೇಕೆ ಹಾಲನ್ನು ಸೇವಿಸುವುದರಿಂದ ದೇಹದಿಂದ ಹೆಚ್ಚುವರಿ ಕೊಬ್ಬನ್ನು ಹೊರಹಾಕಲು ಮತ್ತು ದೇಹದ ತೂಕವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ. ಇದರ ದೈನಂದಿನ ಸೇವನೆಯು ಹೃದ್ರೋಗ, ಪಾರ್ಶ್ವವಾಯು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿ ಕ್ಯಾನ್ಸರ್ ಕೋಶ ಬೆಳೆಯುವುದನ್ನು ತಡೆಯುತ್ತದೆ. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಮೇಕೆ ಹಾಲಿನಲ್ಲಿ ಕಂಡುಬರುವ 2 ಕ್ಯಾಸಿನ್ ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತದೆ.