ಪುಟ್ಟ ಬಾಲಕನೊಬ್ಬ ಅನ್‌ಕೋಂಬಬಲ್ ಹೇರ್ ಸಿಂಡ್ರೋಮ್ (ಯುಎಚ್ಎಸ್, ತಲೆಗೂದಲು ಬಾಚಲಾಗದ ಖಾಯಿಲೆ) ಎಂಬ ಬಲು ಅಪರೂಪದ ರೋಗದಿಂದ ಬಳಲುತ್ತಿದ್ದಾನೆ. ಈತನ ತಲೆಗೂದಲು ನೀರು ನಿರೋಧಕವಾಗಿದೆ.
14 ತಿಂಗಳ ವಯಸ್ಸಿನ ಮಗುವಿನ ತಲೆಗೂದಲು ಹೊಂಬಣ್ಣದಲ್ಲಿದ್ದು, ಕೂದಲು ನೇರವಾಗಿ ನಿಂತಿದೆ. ವಾರಕ್ಕೊಮ್ಮೆ ಮಾತ್ರ ಮಗು ಲಾಕ್‌ಲಾನ್ ನ ತಲೆಯನ್ನು ತೊಳೆಯಬೇಕಾಗುತ್ತದೆ. ವಾಟರ್ ಪ್ರೂಫ್ ತಲೆಗೂದಲಾಗಿರುವುದರಿಂದ, ನೀರು ಹಾಗೂ ಶಾಂಪೂ ಜೊತೆಗೆ ಸ್ಯಾಚುರೇಟ್ ಮಾಡಲು ಒಂದು ನಿಮಿಷ ತೆಗೆದುಕೊಳ್ಳುತ್ತದೆ ಎಂದು ಮಗುವಿನ ತಾಯಿ ತಿಳಿಸಿದ್ದಾರೆ.
ವಿಶ್ವಾದ್ಯಂತ ಕೇವಲ 100 ಪ್ರಕರಣಗಳೊಂದಿಗೆ ಈ ಖಾಯಿಲೆಯು ಅತ್ಯಂತ ಅಪರೂಪವಾಗಿದೆ. ಲಾಕ್‌ಲಾನ್ ಸುಮಾರು ಐದು ತಿಂಗಳ ವಯಸ್ಸಿನವನಾಗಿದ್ದಾಗ, ಅವನ ಕೂದಲು ಬೆಳೆಯಲು ಪ್ರಾರಂಭಿಸಿದಾಗ ನೇರವಾಗಿ ನಿಲ್ಲುತ್ತಿತ್ತು. ಕೂದಲು ತುಂಬಾ ಮೃದು ಮತ್ತು ಅಸ್ಪಷ್ಟವಾಗಿ ಬರುತ್ತಿತ್ತು ಎಂದು ಮಗುವಿನ ತಾಯಿ ಕ್ಯಾಟ್ಲಿನ್ ಹೇಳಿದ್ದಾರೆ.
ಕೂದಲು ಬೆಳೆಯುತ್ತಾ ಹೋದಂತೆ ಅದು ಯಾವತ್ತೂ ಎಲ್ಲರಂತೆ ಮಡಚಿ ನಿಂತೇ ಇಲ್ಲ. ಆನುವಂಶಿಕ ಸ್ಥಿತಿಯಿಂದ ಈ ಖಾಯಿಲೆ ಬರುತ್ತದೆ. ಇದರಲ್ಲಿ ಕೂದಲಿನಲ್ಲಿರುವ ರಚನಾತ್ಮಕ ಅಸಂಗತತೆಯು ಅದನ್ನು ಮಡಚದಂತೆ ತಡೆಯುತ್ತದೆ.