ಪ್ರತಿ 6 ತಿಂಗಳಿಗೆ ಒಮ್ಮೆಯಾದರೂ ನೆಗಡಿ, ಕೆಮ್ಮು ಇವೆಲ್ಲ ಮಾಮೂಲು. ಈ ಸಣ್ಣ ಪುಟ್ಟ ಸಮಸ್ಯೆಗೆಲ್ಲ ವೈದ್ಯರ ಬಳಿ ಹೋಗುವುದಕ್ಕಿಂತ ಮನೆಯಲ್ಲಿಯೇ ಕೆಲವೊಂದು ಮದ್ದುಗಳನ್ನು ಪ್ರಯತ್ನಿಸಬಹುದು. ಯಾಕಂದ್ರೆ ನಾವು ಪ್ರತಿದಿನ ಅಡುಗೆಗೆ ಬಳಸುವ ದೇಶೀಯ ಮಸಾಲೆಗಳಲ್ಲಿ ಇದಕ್ಕೆಲ್ಲ ಪರಿಹಾರವಿದೆ. ಅವುಗಳಲ್ಲೊಂದು ಪರಿಮಳಯುಕ್ತ ಇಂಗು. ಇದನ್ನು ಅಡುಗೆಗೆ ಬೆರೆಸಿದರೆ ಸುವಾಸನೆಯ ಜೊತೆಗೆ ರುಚಿಯೂ ಹೆಚ್ಚುತ್ತದೆ.
ಇಂಗನ್ನು ಸೇವನೆ ಮಾಡುವುದರಿಂದ ಹಲವಾರು ರೋಗಗಳನ್ನು ನಿವಾರಿಸಬಹುದು. ಏಕೆಂದರೆ ಇದು ಔಷಧೀಯ ಗುಣಗಳ ನಿಧಿಯಾಗಿದೆ. ಇಂಗನ್ನು ಬಿಸಿನೀರಿಗೆ ಬೆರೆಸಿಕೊಂಡು ಕುಡಿಯುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಬಿಸಿ ನೀರಿಗೆ ಇಂಗನ್ನು ಬೆರೆಸಿಕೊಂಡು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
ತಲೆನೋವು ನಿವಾರಣೆ – ತಲೆನೋವಿನ ಸಮಸ್ಯೆ ಇರುವವರಿಗೆ ಇಂಗಿನ ನೀರು ಬಹಳ ಉಪಯುಕ್ತವಾಗಿದೆ. ಉರಿಯೂತದ ಗುಣಲಕ್ಷಣಗಳು ಈ ಮಸಾಲೆಯಲ್ಲಿ ಕಂಡುಬರುತ್ತವೆ. ಜೊತೆಗೆ ಇದು ತಲೆಯ ರಕ್ತನಾಳಗಳಲ್ಲಿನ ಊತವನ್ನು ಕಡಿಮೆ ಮಾಡುತ್ತದೆ. ತಲೆನೋವಿನಿಂದ ಪರಿಹಾರವನ್ನು ನೀಡುತ್ತದೆ.
ಶೀತ ಮತ್ತು ಕೆಮ್ಮು – ಶೀತ, ಕೆಮ್ಮು ಮತ್ತು ನೆಗಡಿ ಇದ್ದರೆ ಇಂಗಿನ ನೀರನ್ನು ಕುಡಿಯಬೇಕು. ಈ ಮೂಲಕ ಉಸಿರಾಟದ ತೊಂದರೆಗಳನ್ನು ದೂರವಿಡಬಹುದು. ಬದಲಾಗುತ್ತಿರುವ ಋತುವಿನಲ್ಲಿ ಇದನ್ನು ನಿಯಮಿತವಾಗಿ ಕುಡಿಯಿರಿ.
ತೂಕ ನಷ್ಟ – ಇಂಗಿನ ನೀರಿನ ಸಹಾಯದಿಂದ ತೂಕವನ್ನು ಸಹ ಕಡಿಮೆ ಮಾಡಬಹುದು. ಏಕೆಂದರೆ ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ತೂಕವನ್ನು ನಿಯಂತ್ರಿಸುತ್ತದೆ. ಇದರೊಂದಿಗೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ.