ಆಹಾರದ ವಿಷ್ಯದಲ್ಲಿ ಜನರು ರುಚಿಗೆ ಆದ್ಯತೆ ನೀಡುತ್ತಾರೆ. ಆರೋಗ್ಯಕ್ಕಿಂತ ಬಾಯಿಗೆ ರುಚಿ ನೀಡುವ ಆಹಾರವನ್ನು ಹೆಚ್ಚು ಸೇವನೆ ಮಾಡ್ತಾರೆ. ಕೆಲವು ಆಹಾರಗಳು ಹಸಿಯಾಗಿ ತಿಂದರೆ ರುಚಿ ಕಡಿಮೆ. ಜೊತೆಗೆ ಬೇಯಿಸಿದಾಗ ಮಾತ್ರ ಅದ್ರ ಪೌಷ್ಟಿಕಾಂಶಗಳು ಸಂಪೂರ್ಣವಾಗಿ ದೇಹ ಸೇರುತ್ತವೆ.
ಕೆಲವು ತರಕಾರಿಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲಾಗುವುದಿಲ್ಲ. ಸರಿಯಾಗಿ ಬೇಯಿಸಿ ಸೇವನೆ ಮಾಡಿದಲ್ಲಿ ಮಾತ್ರ ಸುಲಭವಾಗಿ ಜೀರ್ಣವಾಗುತ್ತವೆ. ಬೇಯಿಸಿದ ಆಹಾರವು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಆಮ್ಲವನ್ನು ತಡೆಯುತ್ತದೆ. ಮೂತ್ರಪಿಂಡವನ್ನು ಆರೋಗ್ಯವಾಗಿರಿಸುತ್ತದೆ. ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತೆ. ಇದೇ ಕಾರಣಕ್ಕೆ ಈ ಕೆಳಗಿನ ಪದಾರ್ಥವನ್ನು ಬೇಯಿಸಿ ಸೇವನೆ ಮಾಡಬೇಕು.
ಜೋಳದಲ್ಲಿ ಅನೇಕ ಪೋಷಕಾಂಶಗಳಿವೆ. ಇದರಲ್ಲಿರುವ ವಿಟಮಿನ್ ಬಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತಾಮ್ರ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಅನೇಕ ಖನಿಜ ಅಂಶಗಳು ಜೋಳದಲ್ಲಿ ಕಂಡುಬರುತ್ತವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡ್ತಿದ್ದಾರೆ. ಇದೇ ಕಾರಣಕ್ಕೆ ಬ್ರೊಕೊಲಿಯನ್ನು ಹೆಚ್ಚು ತಿನ್ನುತ್ತಿದ್ದಾರೆ. ವಿಟಮಿನ್ ಸಿ, ವಿಟಮಿನ್ ಕೆ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಮುಂತಾದ ಅಂಶಗಳನ್ನು ಹೊಂದಿರುವ ಬ್ರೊಕೊಲಿಯನ್ನು ಬೇಯಿಸಿ ಸೇವನೆ ಮಾಡಬೇಕು.
ಬೇಯಿಸಿದ ಆಲೂಗಡ್ಡೆಯಲ್ಲಿ ಕ್ಯಾಲೊರಿ ಪ್ರಮಾಣ ಕಡಿಮೆಯಿರುತ್ತದೆ. ಬೇಯಿಸಿದ ಆಲೂಗಡ್ಡೆ ಜೊತೆ ಟೊಮೊಟೊ, ಈರುಳ್ಳಿ ಮತ್ತು ಇತರ ಪದಾರ್ಥಗಳನ್ನು ಸೇರಿಸಿ ತಿನ್ನಬೇಕು.
ಸೀಗಡಿಗಳನ್ನು ಅತ್ಯುತ್ತಮ ಸಮುದ್ರಾಹಾರವೆಂದು ಪರಿಗಣಿಸಲಾಗುತ್ತದೆ. ಇದು ನಮ್ಮನ್ನು ರೋಗದಿಂದ ದೂರವಿಡುತ್ತದೆ, ಇದನ್ನು ಕುದಿಸಿ ಸಲಾಡ್ ಅಥವಾ ಸೂಪ್ ರೀತಿ ಸೇವನೆ ಮಾಡಬಹುದು.
ಬೇಯಿಸಿದ ಮೊಟ್ಟೆಯ ಬಿಳಿಭಾಗದಲ್ಲಿರುವ ಪ್ರೋಟೀನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.