ಹಿಂದೂ ಧರ್ಮದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಕೆಲವೊಂದು ನಿಯಮಗಳನ್ನು ಹೇಳಲಾಗಿದೆ. ಇದನ್ನು ಪಾಲಿಸಿದ್ರೆ ಮಹಿಳೆ ಸುರಕ್ಷಿತವಾಗಿರ್ತಾಳೆಂದು ನಂಬಲಾಗಿದೆ. ಮಹಿಳೆಯ ದೇಹ ಕೋಮಲವಾಗಿರುವ ಕಾರಣ ನಕಾರಾತ್ಮಕ ಶಕ್ತಿ ಪ್ರಭಾವ ಬೇಗ ಆಗುತ್ತದೆ. ಹಿಂದೂ ಧರ್ಮದಲ್ಲಿ ಕೆಲವೊಂದನ್ನು ಅಪಶಕುನವೆಂದು ಹೇಳಲಾಗಿದೆ. ಇದು ನಡೆದಾಗ ಮಹಿಳೆಯರು ಎಚ್ಚರಗೊಳ್ಳಬೇಕಾಗುತ್ತದೆ.
ಮನೆಯ ಆಸುಪಾಸು ಗೊಬೆ ಧ್ವನಿ ಕೇಳಿ ಬಂದ್ರೆ ಅದು ಅಪಶಕುನದ ಸಂಕೇತ. ಗೊಬೆಯನ್ನು ಅಶುಭವೆನ್ನಲಾಗುತ್ತದೆ. ಅನೇಕ ಬಾರಿ ಇದನ್ನು ಕೇಳಿ ಜನರು ಸುಮ್ಮನಾಗ್ತಾರೆ. ಆದ್ರೆ ಗೊಬೆ ಕೂಗುವುದನ್ನು ಕೇಳಿದ ನಂತ್ರ ಜನರು ನಿರ್ಲಕ್ಷ್ಯ ಮಾಡಬಾರದು. ಗೂಬೆ ಕೂಗು ಮಹಿಳೆಯನ್ನು ನಕಾರಾತ್ಮಕ ಶಕ್ತಿಗೆ ಎಳೆಯುವ ಸಂಕೇತವಾಗುತ್ತದೆ. ನಕಾರಾತ್ಮಕ ಶಕ್ತಿ ಪ್ರಭಾವಕ್ಕೆ ಬಂದ ಮಹಿಳೆ ಮಾನಸಿಕ ಸ್ಥಿತಿ ಹದಗೆಡಬಹುದು.