alex Certify ಈ ನಾಲ್ಕು ರಾಶಿ ʼಹುಡುಗರʼ ಹಿಂದೆ ಬೀಳ್ತಾರೆ ಹುಡುಗಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ನಾಲ್ಕು ರಾಶಿ ʼಹುಡುಗರʼ ಹಿಂದೆ ಬೀಳ್ತಾರೆ ಹುಡುಗಿಯರು

ಇಂದಿನ ಕಾಲದಲ್ಲಿ ಹುಡುಗ್ರು ಸದಾ ಸುಂದರವಾಗಿ ಕಾಣಲು ಬಯಸ್ತಾರೆ. ಹುಡುಗಿಯರು ತಮ್ಮ ಹಿಂದೆ ಬೀಳಬೇಕೆಂದು ಬಯಸ್ತಾರೆ. ಇದಕ್ಕಾಗಿ ನಾನಾ ಕಸರತ್ತು ಮಾಡ್ತಾರೆ. ಆದ್ರೆ ನಾಲ್ಕು ರಾಶಿ ಹುಡುಗ್ರ ಹಿಂದೆ ಹುಡುಗಿಯರು ಕ್ಯೂ ನಿಲ್ಲುತ್ತಾರಂತೆ. ಹಾಗಂತ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಮಿಥುನ ರಾಶಿ ಹುಡುಗರಿಗೆ ಹುಡುಗಿಯರನ್ನು ಆಕರ್ಷಿಸಲು ಹೆಚ್ಚು ಕಷ್ಟಪಡಬೇಕಾಗಿಲ್ಲ. ಈ ರಾಶಿಯವರ ಆಕರ್ಷಕ ವ್ಯಕ್ತಿತ್ವ ಹುಡುಗಿಯರನ್ನು ಸೆಳೆಯುತ್ತದೆ. ಮೃದು ಹಾಗೂ ರೋಮ್ಯಾಂಟಿಕ್ ಸ್ವಭಾವದ ಈ ರಾಶಿ ಹುಡುಗ್ರನ್ನು ಮದುವೆಯಾಗಲು ಹುಡುಗಿಯರು ಹಿಂದೆ ಬೀಳ್ತಾರೆ.

ಸಿಂಹ ರಾಶಿಯ ಹುಡುಗರು ಹೃದಯವಂತರಾಗಿರುತ್ತಾರೆ. ಒಳ್ಳೆ ಸಂಬಂಧ ಹೊಂದಿರುತ್ತಾರೆ. ಸ್ವಭಾವದಲ್ಲಿ ರೋಮ್ಯಾಂಟಿಕ್ ಆಗಿರುತ್ತಾರೆ. ಹುಡುಗಿಯರಿಗೆ ಈ ರಾಶಿ ಹುಡುಗ್ರನ್ನು ಫ್ಲರ್ಟ್ ಮಾಡಲು ಬೇಸರವಾಗುವುದಿಲ್ಲ. ಪ್ರಭಾವಶಾಲಿ ಹುಡುಗ್ರು ತುಂಬಾ ಸೂಕ್ಷ್ಮ ಸ್ವಭಾವದವರೂ ಆಗಿರ್ತಾರೆ.

ತುಲಾ ರಾಶಿ ಹುಡುಗರ ಕಣ್ಣಲ್ಲಿ ಒಂದು ವಿಶೇಷ ಆಕರ್ಷಣೆಯಿರುತ್ತದೆ. ಇದು ಎಲ್ಲ ಹುಡುಗಿಯರನ್ನು ಸೆಳೆಯುತ್ತದೆ. ಈ ರಾಶಿ ಹುಡುಗ್ರ ಸ್ವಭಾವ ಉಳಿದ ಹುಡುಗರಿಗಿಂತ ಭಿನ್ನವಾಗಿರುತ್ತದೆ. ಒಂದೇ ಸಮಯದಲ್ಲಿ ಅನೇಕ ಕೆಲಸಗಳನ್ನು ನಿಭಾಯಿಸುವ ಹುಡುಗ್ರ ಪ್ರೀತಿ ಆಳವಾಗಿರುತ್ತದೆ.

ಮಕರ ರಾಶಿ ಹುಡುಗ್ರು, ಹುಡುಗಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗ್ತಾರೆ. ಈ ರಾಶಿ ಹುಡುಗ್ರು ಸುಂದರವಾಗಿರುತ್ತಾರೆ. ಮೆಚ್ಚಿಸಲು ಹೆಚ್ಚಿನ ಕಸರತ್ತು ಮಾಡಬೇಕಾಗಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...