ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ. ದಾನ ಮಾಡಲು ಸಮರ್ಥನಿರುವ ವ್ಯಕ್ತಿ ಅಗತ್ಯವಿರುವವರಿಗೆ ಅವಶ್ಯವಾಗಿ ದಾನ ಮಾಡಬೇಕಾಗುತ್ತದೆ. ಅದ್ರಲ್ಲೂ ಮನೆಗೆ ಬರುವ ಈ ನಾಲ್ಕು ಮಂದಿಯನ್ನು ಎಂದೂ ಬರಿಗೈನಲ್ಲಿ ಕಳುಹಿಸಬಾರದು,
ಮನೆಗೆ ಬರುವ ಭಿಕಾರಿಯನ್ನು ಎಂದೂ ಖಾಲಿ ಕೈನಲ್ಲಿ ಕಳುಹಿಸಬಾರದು. ಖಾಲಿ ಕೈನಲ್ಲಿ ಭಿಕ್ಷುಕ ಮನೆಯಿಂದ ಹೋದ್ರೆ ದರಿದ್ರ ನಾರಾಯಣ ಮನೆ ಪ್ರವೇಶ ಮಾಡಿದ ಎಂದೇ ಅರ್ಥ.
ಮಂಗಳಮುಖಿಯರನ್ನು ಬುಧ ಗ್ರಹವೆಂದು ಪರಿಗಣಿಸಲಾಗಿದೆ. ಅವರು ಮಾಡಿದ ಆಶೀರ್ವಾದ ಬೇಗ ಫಲ ನೀಡುತ್ತದೆ ಎಂದೂ ನಂಬಲಾಗಿದೆ. ಹಾಗಾಗಿ ಮನೆಗೆ ಮಂಗಳಮುಖಿಯರು ಬಂದ್ರೆ ಅವರನ್ನು ಖಾಲಿ ಕೈನಲ್ಲಿ ಕಳುಹಿಸಬೇಡಿ.
ಮನೆಗೆ ಬರುವ ರೋಗಿಗಳನ್ನೂ ಖಾಲಿ ಕೈನಲ್ಲಿ ಕಳುಹಿಸಬಾರದು. ರೋಗಿಗಳನ್ನು ಶನಿ ಹಾಗೂ ರಾಹುವಿಗೆ ಹೋಲಿಕೆ ಮಾಡಲಾಗುತ್ತದೆ. ರೋಗಿಗಳಿಗೆ ದಾನ ಮಾಡಿದ್ರೆ ಶುಭ ಫಲ ಪ್ರಾಪ್ತಿಯಾಗುತ್ತದೆ.
ವೃದ್ಧ ಭಿಕ್ಷುಕರಿಗೆ ಎಂದೂ ದಾನ ನೀಡದೆ ಖಾಲಿ ಕೈನಲ್ಲಿ ಕಳುಹಿಸಬಾರದು. ವೃದ್ಧರ ಆಶೀರ್ವಾದದಿಂದ ಗುರುವಿನ ಅಶುಭ ಪ್ರಭಾವ ದೂರವಾಗುತ್ತದೆ.