ಕೆಲವೊಂದು ವಸ್ತುಗಳಿಗೆ ವಾಸ್ತು ಶಾಸ್ತ್ರದಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ. ಆ ವಸ್ತುಗಳು ಮನೆಯಲ್ಲಿದ್ದರೆ ವಾಸ್ತು ದೋಷ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ನಷ್ಟವಾಗಿ ಸಕಾರಾತ್ಮಕ ಶಕ್ತಿಯ ವೃದ್ಧಿಯಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈ ನಾಲ್ಕರಲ್ಲಿ ಒಂದನ್ನು ಮನೆಯಲ್ಲಿ ಅವಶ್ಯಕವಾಗಿ ಇಡಬೇಕು.
ವಾಸ್ತು ಶಾಸ್ತ್ರದ ಪ್ರಕಾರ, ಶ್ರೀಯಂತ್ರವನ್ನು ಮನೆಯಲ್ಲಿಡುವುದು ಮಂಗಳಕರ. ಶ್ರೀಯಂತ್ರವಿರುವ ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಶ್ರೀಯಂತ್ರವಿರುವವರ ಮನೆಯಲ್ಲಿ ಎಂದೂ ಆರ್ಥಿಕ ನಷ್ಟ ಎದುರಾಗುವುದಿಲ್ಲವೆಂದು ನಂಬಲಾಗಿದೆ.
ವಾಸ್ತು ದೋಷವನ್ನು ದೂರ ಮಾಡುವುದ್ರಲ್ಲಿ ಆಮೆ ಬಹು ಮುಖ್ಯ ಪಾತ್ರವಹಿಸುತ್ತದೆ. ಮನೆಯಲ್ಲಿ ಆಮೆಯ ಮೂರ್ತಿಯಿದ್ರೆ ಸುಖ, ಶಾಂತಿ, ಸಮೃದ್ಧಿ ಸದಾ ನೆಲೆಸಿರುತ್ತದೆ.
ಚೈನೀಸ್ ನಾಣ್ಯಗಳನ್ನು ಮನೆಯ ಮುಖ್ಯದ್ವಾರಕ್ಕೆ ಹಾಕುವುದ್ರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ. ಆರ್ಥಿಕ ವೃದ್ಧಿಯಾಗಿ ಶಾಂತಿ ನೆಲೆಸುತ್ತದೆ.
ಮನೆಯಲ್ಲಿ ಪಿರಾಮಿಡ್ ಇಡುವುದು ಶುಭಕರ. ಮನೆಯ ಯಾವುದೇ ದಿಕ್ಕಿನಲ್ಲಿ ವಾಸ್ತು ದೋಷವಿದ್ರೂ ಇದನ್ನು ಪಿರಾಮಿಡ್ ಕಡಿಮೆ ಮಾಡುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ.