alex Certify ಈ ನಗರದಲ್ಲಿ ಕೊರೊನಾ ಲಸಿಕೆ ಪಡೆದವರಿಗೆ 30 ನಿಮಿಷ ಸೆಕ್ಸ್‌ ಉಚಿತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ನಗರದಲ್ಲಿ ಕೊರೊನಾ ಲಸಿಕೆ ಪಡೆದವರಿಗೆ 30 ನಿಮಿಷ ಸೆಕ್ಸ್‌ ಉಚಿತ….!

ಕೊರೊನಾ ತಡೆ ಲಸಿಕೆಯನ್ನು ಪಡೆಯಲು ಅನೇಕ ನೆಪಗಳನ್ನು ಒಡ್ಡುತ್ತಾ ಹಿಂದೇಟು ಹಾಕುವವರು ಕೇವಲ ಭಾರತದಲ್ಲಿ ಮಾತ್ರವಲ್ಲ, ಇತರ ದೇಶಗಳಲ್ಲೂ ಹೆಚ್ಚುತ್ತಿದ್ದಾರೆ. ಲಸಿಕೆಯಿಂದ ಹೃದಯಾಘಾತ ಆಗುತ್ತದೆ. ಪುರುಷತ್ವ ಕ್ಷೀಣಿಸುತ್ತದೆ ಎಂಬ ಕಲ್ಪಿತ ಸಿದ್ಧಾಂತಗಳು ಜನರ ತಲೆಹೊಕ್ಕಿವೆ. ಮಹಿಳೆಯರಲ್ಲಿ ಕೊರೊನಾ ಲಸಿಕೆಯಿಂದ ಬಂಜೆತನ ಉಂಟಾಗುತ್ತದೆ ಎಂಬ ನಂಬಿಕೆ ಕೂಡ ಹಲವು ದೇಶಗಳಲ್ಲಿ ಹಬ್ಬಿದೆ.

ಇಂಥವರನ್ನು ಲಸಿಕಾ ಅಭಿಯಾನದ ಭಾಗವಾಗಿಸಲು ಸರ್ಕಾರಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ. ಕೆಲವೆಡೆ ಒತ್ತಾಯದಿಂದ ಲಸಿಕೆಯನ್ನು ಕೊಡಲಾಗುತ್ತಿದೆ. ಮತ್ತೆ, ಕೆಲವೆಡೆ ಲಸಿಕೆ ಪಡೆದರೆ ಅನೇಕ ಉಚಿತ ಕೊಡುಗೆಗಳನ್ನು ನೀಡಲಾಗುತ್ತಿದೆ.

ಉದಾಹರಣೆಗೆ, ಕ್ಲಬ್‌ಗಳ ಸದಸ್ಯತ್ವ, ಉಚಿತ ಬಿಯರ್‌, ಲಾಟರಿ ಟಿಕೆಟ್‌ಗಳು, ದೊಡ್ಡ ಆಕರ್ಷಕ ಉಡುಗೊರೆಗಳನ್ನು ಕೂಡ ಕೆಲವು ನಗರಗಳಲ್ಲಿ ಜನರಿಗೆ ಲಸಿಕೆ ಪಡೆದ ಬಳಿಕ ನೀಡಲಾಗುತ್ತಿದೆ. ಈ ಆಮಿಷಕ್ಕಾದರೂ ಅವರು ಲಸಿಕಾ ಕೇಂದ್ರಗಳ ಕಡೆ ಬರಲಿ ಎನ್ನುವ ಕಾಳಜಿ ಇದರ ಹಿಂದಿದೆ.

BIG NEWS: ಸಿಎಂ ಬೊಮ್ಮಾಯಿ ಬದಲಾವಣೆ ನೂರಕ್ಕೆ ನೂರರಷ್ಟು ಸತ್ಯ ಎಂದ ಮಾಜಿ ಸಚಿವ

ಇವೆಲ್ಲ ಕೊಡುಗೆಗಳನ್ನು ಮೀರಿದ ಒಂದು ಭರ್ಜರಿ ಕೊಡುಗೆ ಯುರೋಪ್‌ ಪ್ರಾಂತ್ಯದ ವಿಯೆನ್ನಾ ನಗರದಲ್ಲಿ ಲಸಿಕೆ ಪಡೆದವರಿಗೆ ನೀಡಲಾಗಿದೆ. ವೇಶ್ಯಾಗೃಹ ಅಥವಾ ಲೈಂಗಿಕ ಕಾರ್ಯಕರ್ತೆಯರ ಅಡ್ಡಾದಲ್ಲಿ 30 ನಿಮಿಷ ಉಚಿತ ಲೈಂಗಿಕ ಕ್ರಿಯೆ ಅಥವಾ ಸೆಕ್ಸ್‌ ಚಾಟ್‌ಗೆ ಅವಕಾಶ ಮಾಡಿಕೊಡಲಾಗಿದೆ…!

ಹೌದು, ’ ಫನ್‌ ಪ್ಯಾಲೆಸ್ಟ್‌’ ಎಂಬ ಲೈಂಗಿಕ ಕಾರ್ಯಕರ್ತೆಯರ ಅಡ್ಡಾದಲ್ಲಿ ಲಸಿಕೆ ಪಡೆದವರಿಗೆ, ಅವರು ಆಯ್ಕೆ ಮಾಡಿಕೊಳ್ಳುವ ಲೈಂಗಿಕ ಕಾರ್ಯಕರ್ತೆ ಜತೆಗೆ 30 ನಿಮಿಷಗಳನ್ನು ಉಚಿತವಾಗಿ ಕಳೆಯುವ ಅವಕಾಶ ನೀಡಲಾಗುತ್ತಿದೆ.

ಬಸವರಾಜ ಬೊಮ್ಮಾಯಿ ಅಧಿಕಾರ ಹೋಗುತ್ತೆ, ಜನವರಿಗೆ ಹೊಸ ಸಿಎಂ: ಶಿವರಾಜ್ ತಂಗಡಗಿ ಹೊಸ ಬಾಂಬ್

ಕೊರೊನಾ ಸಾಂಕ್ರಾಮಿಕ, ಬಳಿಕ ಲಾಕ್‌ಡೌನ್‌ನಿಂದ ಫನ್‌ ಪ್ಯಾಲೆಸ್ಟ್‌ಗೆ ವ್ಯವಹಾರವು ಶೇ.50 ರಷ್ಟು ಕಡಿಮೆ ಆಗಿದೆಯಂತೆ. ಹಾಗಾಗಿ ಅವರು ಈ ವಿನೂತನ ಆಫರ್‌ ಕೊಡುತ್ತಿದ್ದಾರೆ. ಒಂದೆಡೆ ಸರಕಾರದ ಲಸಿಕಾ ಅಭಿಯಾನಕ್ಕೆ ವೇಗ ಸಿಗಬೇಕು. ಮತ್ತೊಂದೆಡೆ ತಮ್ಮ ವ್ಯಾಪಾರ ಕೂಡ ಚಿಗುರಬೇಕು ಎನ್ನುವುದು ಫನ್‌ ಪ್ಯಾಲೆಸ್ಟ್‌ ಮಾಲೀಕ ಕ್ರಿಸ್ಟೋಫ್‌ ಲೀಲಾಶೆರ್‌ ಐಡಿಯಾ.

ಆಸ್ಟ್ರಿಯಾ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಲಸಿಕೆ ಪಡೆಯದವರಿಗೆ ಸೆಲೂನ್‌, ರೆಸ್ಟೊರೆಂಟ್‌ಗಳಿಗೆ ಪ್ರವೇಶವನ್ನೇ ನಿರ್ಬಂಧಿಸಿದೆ. ಲಸಿಕೆ ಪಡೆಯದವರು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳಲು ಕೂಡ ಹಿಂಜರಿಕೆ ಆಗುವಂತೆ ಮಾಡುವ ಮೂಲಕ ಲಸಿಕಾ ಕೇಂದ್ರಗಳಿಗೆ ಅವರನ್ನು ತೆರಳುವಂತೆ ಮಾಡುವ ಅನಿವಾರ್ಯತೆ ಯುರೋಪ್‌ ನಗರಾಡಳಿತಗಳಿಗೆ ಎದುರಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...