ಬಜಾಜ್ ಆಟೋ ಕೆಲ ದಿನಗಳ ಹಿಂದಷ್ಟೇ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ಗಳು ದೆಹಲಿ, ಮುಂಬೈ ಹಾಗೂ ಗೋವಾದಲ್ಲಿ ಲಭ್ಯವಿದೆ ಎಂದು ಹೇಳಿತ್ತು. ಕೆಲವು ದಿನಗಳ ಹಿಂದಿನಿಂದ ಬಜಾಜ್ ಆಟೋ ಕಂಪನಿಯು ಈ ಮೂರು ನಗರಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಿವೆ. ಈ ಮೂಲಕ ಚೇತಕ್ ಸ್ಕೂಟರ್ಗಳು ದೇಶದ 20 ನಗರಗಳಲ್ಲಿ ಲಭ್ಯವಿದೆ ಎಂದು ವರದಿಯಾಗಿದೆ.
ಕಳೆದ ವರ್ಷದವರೆಗೂ ಚೇತಕ್ ಸ್ಕೂಟರ್ಗಳು ದೇಶದ 8 ನಗರಗಳಲ್ಲಿ ಮಾತ್ರ ಬುಕ್ಕಿಂಗ್ಗೆ ಲಭ್ಯವಿತ್ತು. ಆದರೆ ಈ ವರ್ಷದಲ್ಲಿ ಹೆಚ್ಚುವರಿ 12 ನಗರಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಮುಂಬೈ, ದೆಹಲಿ, ಗೋವಾ, ಸೂರ್, ಕೊಯಂಬತ್ತೂರು, ಕೊಚ್ಚಿ, ಹುಬ್ಬಳ್ಳಿ, ಮಧುರೈ, ನಾಸಿಕ್, ಕೋಝಿಕ್ಕೋಡ್, ವಸಾಯ್ ಹಾಗೂ ವಿಶಾಖಪಟ್ಟಣಂನಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬುಕ್ ಮಾಡಬಹುದಾಗಿದೆ. ಆಸಕ್ತ ಗ್ರಾಹಕರು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಆನ್ಲೈನ್ನಲ್ಲಿ 2 ಸಾವಿರ ರೂಪಾಯಿಗಳ ಟೋಕನ್ಗಳನ್ನು ಖರೀದಿಸಿ ಬುಕ್ಕಿಂಗ್ ಮಾಡಬಹುದಾಗಿದೆ.
ಇನ್ನು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ಗಳ ವಿಚಾರವಾಗಿ ಮಾತನಾಡಿದ ಬಜಾಜ್ ಆಟೋ ಎಕ್ಸಿಕ್ಯೂಟಿವ್ ಎಡಿಟರ್, ಚೇತಕ್ನ ಯಶಸ್ಸನ್ನು ಸಂಪೂರ್ಣವಾಗಿ ಪರೀಕ್ಷಿಸಿದ, ವಿಶ್ವಾಸಾರ್ಹ ಉತ್ಪನ್ನದ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ. ಸ್ಕೂಟರ್ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ಈ ಹೆಚ್ಚುತ್ತಿರುವ ಬೇಡಿಕೆಯನ್ನು ಸರಿಹೊಂದಿಸಲು ಮುಂಬರುವ ದಿನಗಳಲ್ಲಿ ಚೇತಕ್ ನೆಟ್ವರ್ಕ್ನ್ನು ದ್ವಿಗುಣಗೊಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.