ಪ್ರಪಂಚದ ಪ್ರತಿಯೊಂದು ದೇಶವೂ ವಿಭಿನ್ನವಾಗಿದೆ. ಸಂಸ್ಕೃತಿ, ಆಚಾರ-ವಿಚಾರ, ವೇಷಭೂಷಣ, ಭಾಷೆ ಮತ್ತು ಹವಾಮಾನ ಬೇರೆ ಬೇರೆ ತೆರನಾಗಿದೆ. ಆದರೆ ಇದೊಂದು ದೇಶ ಪ್ರಪಂಚದ ಇತರ ಎಲ್ಲಾ ದೇಶಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಅದರ ಹೆಸರು ಗ್ರೀನ್‌ಲ್ಯಾಂಡ್. ಹಿಮದಿಂದ ಆವೃತವಾದ ಸ್ವತಂತ್ರ ದೇಶ ಇದು. ಆದರೆ ಇದು ಡೆನ್ಮಾರ್ಕ್‌ನ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಪ್ರದೇಶದ ಪ್ರಕಾರ ಗ್ರೀನ್‌ಲ್ಯಾಂಡ್ ವಿಶ್ವದ 12ನೇ ದೊಡ್ಡ ದೇಶ. ಆದರೆ ಇಲ್ಲಿನ ಜನಸಂಖ್ಯೆಯು ಸಣ್ಣ ಪಟ್ಟಣಕ್ಕಿಂತಲೂ ಕಡಿಮೆ ಇದೆ.
ಇಲ್ಲಿ ಕೇವಲ 58 ಸಾವಿರ ಜನರು ವಾಸಿಸುತ್ತಿದ್ದಾರೆ. ಈ ದೇಶದಲ್ಲಿ 20 ಲಕ್ಷ ಚದರ ಕಿಲೋಮೀಟರ್ ಪ್ರದೇಶದಲ್ಲಿ ಹಿಮ ಮಾತ್ರ ಗೋಚರಿಸುತ್ತದೆ. ಬಹುತೇಕ ಕಡೆ ರಸ್ತೆಗಳು ಅಸ್ತಿತ್ವದಲ್ಲಿಲ್ಲ. ಗ್ರೀನ್‌ಲ್ಯಾಂಡ್ ಹೆಸರಿಗೆ ತಕ್ಕಂತೆ ಹಸಿರಿನಿಂದ ಆವೃತವಾದ ದೇಶವಲ್ಲ. ಇಲ್ಲಿನ ಸುಮಾರು 85 ಪ್ರತಿಶತದಷ್ಟು ಪ್ರದೇಶವು ಹಿಮದಿಂದ ಆವೃತವಾಗಿದೆ. ಇಲ್ಲಿ ರೈಲು ಸಂಪರ್ಕವೇ ಇಲ್ಲ. ಹೆಚ್ಚಿನ ಜನರು ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಇಲ್ಲಿನ ನಿವಾಸಿಗಳ ಬಳಿ ಕಾರುಗಳಿಲ್ಲ, ಆದರೆ ದೋಣಿ ಮತ್ತು ಹೆಲಿಕಾಪ್ಟರ್‌ಗಳಿವೆ.
ಈ ದೇಶದಲ್ಲಿ ಬೇಸಿಗೆಯಲ್ಲಿ ಕೂಡ ಸೂರ್ಯಾಸ್ತವನ್ನು ನೋಡುವುದು ಅಸಾಧ್ಯ. ಮಧ್ಯರಾತ್ರಿಯಲ್ಲೂ ಸೂರ್ಯನು ಆಕಾಶದಲ್ಲಿ ಗೋಚರಿಸುತ್ತಾನೆ. ಆ ಸಮಯದಲ್ಲಿ ಸಹ ತಾಪಮಾನವು ಸೊನ್ನೆಯಿಂದ 4 ಡಿಗ್ರಿಗಳ ನಡುವೆ ಇರುತ್ತದೆ. ಈ ದೇಶವು ತನ್ನದೇ ಆದ ಯಾವುದೇ ಕರೆನ್ಸಿಯನ್ನು ಹೊಂದಿಲ್ಲ. ಇಲ್ಲಿನ ವಹಿವಾಟು ಡ್ಯಾನಿಶ್ ಕರೆನ್ಸಿ ಡೆನಿಸ್ಕ್ರೋನಾದಲ್ಲಾಗುತ್ತದೆ. ಇಲ್ಲಿನ ಒಂದು ಡಾಲರ್ ಭಾರತದಲ್ಲಿ 10 ರೂಪಾಯಿಗೆ ಸಮ. ಹಿಮಕರಡಿಯನ್ನು ನೋಡಬಹುದಾದ ಇಡೀ ವಿಶ್ವದ ಏಕೈಕ ದೇಶ ಇದು. ಇಲ್ಲಿನ ಬಹುತೇಕ ಜನರು ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.