ಇದು ವ್ಯಾಲೆಂಟೈನ್ಸ್ ವೀಕ್. ಫೆಬ್ರವರಿ 13ನ್ನು ಕಿಸ್ ಡೇ ಆಗಿ ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಜನರು ಕಿಸ್ ಡೇ ಸೆಲಬ್ರೇಟ್ ಮಾಡುತ್ತಾರೆ. ಆದರೆ ಕಿಸ್ ಡೇ ಎಂದುಕೊಂಡು ಪ್ರೀತಿಪಾತ್ರರಿಗೆ ಬಹಿರಂಗವಾಗಿ ಚುಂಬಿಸಿದರೆ ಜೈಲು ಸೇರಬೇಕಾಗಬಹುದು.
ಅನೇಕ ದೇಶಗಳಲ್ಲಿ ಬಹಿರಂಗವಾಗಿ ಚುಂಬಿಸುವುದು ನಿಷಿದ್ಧ, ಈ ಪಟ್ಟಿಯಲ್ಲಿ ಭಾರತವೂ ಸೇರಿದೆ. ಭಾರತದಲ್ಲಿ ಪ್ರೇಮಿಗಳು ಅಥವಾ ದಂಪತಿ ಬಹಿರಂಗವಾಗಿ ಚುಂಬನಕ್ಕಿಳಿದರೆ ಐಪಿಸಿ ಸೆಕ್ಷನ್ 294ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ, ಆರೋಪಿಗಳನ್ನು ಜೈಲಿಗೂ ಕಳಿಸಬಹುದು.
ಯಾವ್ಯಾವ ದೇಶಗಳಲ್ಲಿ ಬಹಿರಂಗ ಚುಂಬನಕ್ಕೆ ಶಿಕ್ಷೆಯಿದೆ ಅನ್ನೋದನ್ನು ನೋಡೋಣ. ಗಲ್ಫ್ ದೇಶಗಳಲ್ಲಿ ಮದುವೆಗೆ ಮೊದಲು ಚುಂಬನ ಮತ್ತು ಸಂಬಂಧವನ್ನು ಹೊಂದುವ ಬಗ್ಗೆ ಅನೇಕ ಕಠಿಣ ಕಾನೂನುಗಳಿವೆ. ಇಲ್ಲಿ ಪಬ್ಲಿಕ್‌ನಲ್ಲಿ ಮುತ್ತಿಟ್ಟು ಸಿಕ್ಕಿ ಬಿದ್ದರೆ ಪೊಲೀಸರು ಹಿಡಿದರೆ ದಂಡ ಹಾಕುತ್ತಾರೆ. ಇದಲ್ಲದೆ ಜೈಲಿಗೂ ಕಳಿಸುತ್ತಾರೆ. ಸಂಗಾತಿಯನ್ನು ಬಹಿರಂಗವಾಗಿ ತಬ್ಬಿಕೊಳ್ಳಲು ಕೂಡ ಅವಕಾಶವಿಲ್ಲ. ಹಾಗಾಗಿ ನವವಿವಾಹಿತ ದಂಪತಿಗಳು ಅಪ್ಪಿತಪ್ಪಿಯೂ ಹನಿಮೂನ್‌ಗೆ ಈ ದೇಶಗಳಿಗೆ ಬರುವುದಿಲ್ಲ. ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಚುಂಬಿಸುವುದನ್ನು ನಿಷೇಧಿಸಲಾಗಿದೆ.
ಪಬ್ಲಿಕ್ ಪ್ಲೇಸ್‌ನಲ್ಲಿ ಮುತ್ತಿಟ್ಟು ಸಿಕ್ಕಿಬಿದ್ದರೆ ಕೇಸ್ ದಾಖಲಾಗುತ್ತದೆ. ಪೊಲೀಸರು ನಿಮ್ಮನ್ನು ಜೈಲಿಗಟ್ಟಬಹುದು. ಇದಲ್ಲದೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಇಂಡೋನೇಷ್ಯಾದಲ್ಲಿ ಕೂಡ ಇದನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಇಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ಚುಂಬನ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಹೀಗೆ ಮಾಡಿದರೆ ಜೈಲಿಗೆ ಹೋಗಬೇಕಾಗಬಹುದು. ದಂಡವನ್ನು ಸಹ ಪಾವತಿಸಬೇಕಾಗಬಹುದು. ಜಪಾನ್ ತನ್ನ ಸಂಸ್ಕೃತಿಯನ್ನು ಹೆಚ್ಚು ಗೌರವಿಸುವ ದೇಶವಾಗಿದೆ. ಇಲ್ಲಿಯೂ ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ಚುಂಬಿಸುವುದು ಅಪರಾಧ. ಇದಕ್ಕಾಗಿ ದಂಡ ತೆರಬೇಕಾಗಬಹುದು. ಜಪಾನ್‌ಗೆ ಭೇಟಿ ನೀಡುವ ಪ್ರವಾಸಿಗರು ಈ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.