ಈ ದೇವಾಲಯದಲ್ಲಿ ನಡೆಯುತ್ತೆ ಮಹಿಳೆಯ ಸ್ತನದ ಪೂಜೆ 04-04-2023 7:40AM IST / No Comments / Posted In: Latest News, Live News, International, Tourism ಜಗತ್ತಿನಲ್ಲಿ ಅನೇಕಾನೇಕ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವೂ ತನ್ನದೇ ಆದ ಮಹತ್ವ ಹೊಂದಿದೆ. ಕೆಲವೊಂದು ದೇವಾಲಯಗಳ ಪದ್ಧತಿ, ಆಚರಣೆ ಆಶ್ಚರ್ಯ ಹುಟ್ಟಿಸುತ್ತದೆ. ಜಪಾನಿನಲ್ಲಿ ವಿಭಿನ್ನ ದೇವಾಲಯವೊಂದಿದೆ. ಇಲ್ಲಿ ಯಾವುದೇ ದೇವರಿಗಲ್ಲ ಬದಲಾಗಿ ಮಹಿಳೆಯರ ಸ್ತನಗಳಿಗೆ ಪೂಜೆ ನಡೆಯುತ್ತದೆ. ಜಪಾನಿನ ಸ್ತನ ದೇವಾಲಯ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಸ್ತನ ಕ್ಯಾನ್ಸರ್ ನಿಂದ ಮಹಿಳೆಯನ್ನು ರಕ್ಷಿಸಲು ಇಲ್ಲಿ ಸ್ತನದ ಪೂಜೆ ನಡೆಯುತ್ತದೆ. ದೇವಸ್ಥಾನದ ಸುತ್ತ ಮುತ್ತ ಮಹಿಳೆಯರ ಸ್ತನಗಳು ಕಾಣಸಿಗ್ತವೆ. ಹತ್ತಿ ಹಾಗೂ ಬಟ್ಟೆಯಿಂದ ಮಾಡಿದ ಸ್ತನಗಳನ್ನು ಇಲ್ಲಿಡಲಾಗಿದೆ. ದೇವಾಲಯಕ್ಕೆ ದೂರದೂರುಗಳಿಂದ ಬರುವ ಮಹಿಳೆಯರು, ಸ್ತನ ಕ್ಯಾನ್ಸರ್ ನಿಂದ ಮುಕ್ತಿ ಹೊಂದಲು ಹಾಗೂ ಸುರಕ್ಷಿತ ಗರ್ಭಧಾರಣೆಗಾಗಿ ಪೂಜೆ ಮಾಡ್ತಾರೆ. ಜಪಾನಿನ ವೈದ್ಯರೊಬ್ಬರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೋಗಿ ರಕ್ಷಣೆಗೆ ಇಲ್ಲಿ ಹರಕೆ ಹೊತ್ತಿದ್ದರಂತೆ. ರೋಗಿಗೆ ಸ್ತನ ಕ್ಯಾನ್ಸರ್ ಗುಣವಾಯ್ತಂತೆ. ಅಲ್ಲಿಂದ ಈ ದೇವಸ್ಥಾನ ಹೆಚ್ಚು ಪ್ರಸಿದ್ಧಿ ಪಡೆದಿದೆ. ಹರಕೆ ಹೊತ್ತುಕೊಳ್ಳುವ ಮಹಿಳೆಯರು ನಂತ್ರ ಬಂದು ನಕಲಿ ಸ್ತನವನ್ನು ಇಲ್ಲಿಟ್ಟು ಹೋಗ್ತಾರೆ. ದೇವಸ್ಥಾನದ ಮುಖ್ಯ ಮೂರ್ತಿಯಿಂದ ಹಿಡಿದು ಪ್ರತಿಯೊಂದೂ ಇಲ್ಲಿ ಸ್ತನದ ಆಕಾರದಲ್ಲಿದೆ.