ದೇಗುಲಗಳ ಬೀಡಾಗಿರುವ ಭಾರತ, ಹಲವಾರು ವೈಶಿಷ್ಟ್ಯಗಳುಳ್ಳ ದೇವಸ್ಥಾನಗಳ ನೆಲೆಯಾಗಿದೆ. ಎಂತಹ ಆಸ್ತಿಕನೂ ನಂಬುವಂತಹ ವಿಚಿತ್ರ ಘಟನೆಗಳು ಕೆಲವು ದೇವಸ್ಥಾನಗಳಲ್ಲಿ ನಡೆಯುತ್ತವೆ. ಇಂತಹುದೇ ಒಂದು ದೇವಸ್ಥಾನ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿದೆ.
ನಾಲ್ಕೂ ದಿಕ್ಕಿನಲ್ಲಿ ಬಾಗಿಲನ್ನು ಹೊಂದಿರುವ ಈ ಮಹಾಲಕ್ಷ್ಮಿ ದೇಗುಲ ಕೆತ್ತನೆಯ ಕಂಬಗಳಿಂದಲೇ ಹೆಸರುವಾಸಿ. ಹಲವಾರು ಸುಂದರ ಕೆತ್ತನೆಗಳ ಕಂಬಗಳ ಮೇಲೆ ನಿಂತಿರುವ ಈ ದೇವಸ್ಥಾನದಲ್ಲಿ ಎಷ್ಟು ಕಂಬಗಳಿವೆ ಎಂಬುದು ಇನ್ನೂ ಯಾರಿಗೂ ತಿಳಿದಿಲ್ಲ. ಹಿಂದೆ ಕೆಲವರು ಎಷ್ಟು ಕಂಬಗಳಿವೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದರಂತೆ. ಹಾಗೆ ಪ್ರಯತ್ನಿಸಿದವರ ಜೀವನದಲ್ಲಿ ಅಹಿತಕರ ಘಟನೆಗಳು ನಡೆದಿವೆ ಎಂದು ದೇವಸ್ಥಾನದ ಆಡಳಿತ ವರ್ಗ ಹೇಳುತ್ತದೆ.
ಈ ಮಹಾಲಕ್ಷ್ಮಿ ದೇವಸ್ಥಾನ ಸುಮಾರು 1800 ವರ್ಷ ಹಳೆಯದು. ಕ್ರಿ.ಶ. 7 ನೇ ಶತಮಾನದಲ್ಲಿ ಚಾಲುಕ್ಯರ ರಾಜ ಕರ್ಣದೇವ ಈ ದೇವಾಲಯದ ನಿರ್ಮಾಣವನ್ನು ಆರಂಭಿಸಿದ. ಈ ದೇವಸ್ಥಾನದ ನಿರ್ಮಾಣ ಕೂಡ ಅಷ್ಟೇ ವಿಭಿನ್ನವಾಗಿದೆ. ಏಕೆಂದರೆ ವರ್ಷದಲ್ಲಿ ಒಮ್ಮೆ ಮಾತ್ರ ಸೂರ್ಯನ ಕಿರಣ ನೇರವಾಗಿ ದೇವಿಯ ಮೇಲೆ ಬೀಳುವಂತೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ವಿಷ್ಟುವಿನ ಮೇಲೆ ಕೋಪಗೊಂಡ ಮಹಾಲಕ್ಷ್ಮಿ ಇಲ್ಲಿ ಬಂದು ನೆಲೆಸಿದ್ದಾಳೆ ಎಂಬ ಪ್ರತೀತಿ ಇದೆ.