ವ್ಯಕ್ತಿಯ ಅಸಂತೋಷ, ದುಃಖಕ್ಕೆ ಕಾರಣ ಪೂರ್ಣಗೊಳ್ಳದ ಆಸೆ. ಏನೇ ಮಾಡಿದ್ರೂ ಒಂದಲ್ಲ ಒಂದು ಸಮಸ್ಯೆ ಬೆನ್ನು ಬಿಡೋದಿಲ್ಲ. ಇದ್ರಿಂದ ಚಡಪಡಿಸುವ ಬದಲು ದೇವರ ದರ್ಶನ ಪಡೆಯೋದು ಬಹಳ ಒಳ್ಳೆಯದು. ಎಲ್ಲ ದಿನ ದೇವರ ದರ್ಶನ ಪಡೆಯಲು ದೇವಸ್ಥಾನಗಳಿಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ವಿಶೇಷ ದಿನಗಳಲ್ಲಿಯಾದ್ರೂ ದೇವಸ್ಥಾನಕ್ಕೆ ಹೋಗಿ ಬನ್ನಿ. ದೇವರ ಮುಂದೆ ನಿಮ್ಮ ನೋವು, ಆಸೆಯನ್ನು ಹೇಳಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಏಕಾದಶಿಯ ದಿನದಂದು ಶ್ರೀಹರಿ ವಿಷ್ಣು ದೇವಸ್ಥಾನಕ್ಕೆ ಹೋಗಿ ನಿಮ್ಮ ಬೇಡಿಕೆಯನ್ನು ದೇವರ ಮುಂದಿಡಿ.
ಪ್ರತಿದಿನ ಯಾವ ವ್ಯಕ್ತಿಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲವೋ ಆ ವ್ಯಕ್ತಿ ತಿಂಗಳಿನಲ್ಲಿ ಬರುವ ಎರಡು ಏಕಾದಶಿಯಂದು ದೇವಸ್ಥಾನಕ್ಕೆ ಹೋದಲ್ಲಿ ಒಂದು ತಿಂಗಳಿನ ಪೂರ್ತಿ ಫಲ ವ್ಯಕ್ತಿಗೆ ಸಿಗಲಿದೆ.
ಕೇಸರಿ ಬಣ್ಣ ಹಾಗೂ ಹಳದಿ ಅಕ್ಕಿಯೊಂದಿಗೆ ಶುಕ್ರವಾರ ದೇವಿ ದೇವಸ್ಥಾನಕ್ಕೆ ಹೋಗಿ. ಮಹಾಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಿ ಬನ್ನಿ. ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಲ್ಲದೆ ಸುಖ, ಶಾಂತಿ ನಿಮ್ಮದಾಗುತ್ತದೆ.
ಶನಿವಾರ ಶನಿದೇವಸ್ಥಾನಕ್ಕೆ ಹೋಗಿ ತೈಲವನ್ನು ಅರ್ಪಿಸಿ. ಉದ್ದಿನಬೇಳೆಯ ಕಿಚಡಿ ಸಿದ್ಧಪಡಿಸಿ ಶನಿದೇವನಿಗೆ ಪೂಜೆ ಮಾಡಿ ಬಡವರಿಗೆ ದಾನ ಮಾಡಿ.
ಜಾತಕದಲ್ಲಿ ಗ್ರಹದೋಷ ಕಂಡುಬಂದಲ್ಲಿ ಮಂಗಳವಾರ ಹನುಮಂತನ ದೇವಸ್ಥಾನಕ್ಕೆ ಹೋಗಿ ಬುಂದಿ ಪ್ರಸಾದವನ್ನು ಹಂಚಿ.
ಶಾಸ್ತ್ರಗಳ ಪ್ರಕಾರ ರಾಹು ಹಾಗೂ ಕೇತುವನ್ನು ಶಾಂತಗೊಳಿಸಲು ಹನುಮಂತನಿಂದ ಮಾತ್ರ ಸಾಧ್ಯ. ಹಾಗಾಗಿ ಹನುಮಂತನ ದೇವಸ್ಥಾನಕ್ಕೆ ಹೋಗಿ ಅಥವಾ ಹನುಮಂತನ ಫೋಟೋಕ್ಕೆ ಸಾಸಿವೆ ಎಣ್ಣೆಯಿಂದ ದೀಪ ಹಚ್ಚಿ.
ಬೆಳಿಗ್ಗೆ ತುಳಸಿ ಗಿಡಕ್ಕೆ ನೀರು ಹಾಕಿ. ದೇವಿ ಮುಂದೆ ನಿಮ್ಮ ಬೇಡಿಕೆಯನ್ನಿಡಿ.