ಪ್ರತಿಯೊಂದು ಕೆಲಸವನ್ನು ಯಾವಾಗ ಮಾಡಬೇಕೆನ್ನುವ ಬಗ್ಗೆ ಶಾಸ್ತ್ರದಲ್ಲಿ ಉಲ್ಲೇಖವಿದೆ. ಕ್ಷೌರ ಮಾಡುವುದು, ಉಗುರು ತೆಗೆಯುವುದನ್ನು ಯಾವ ವಾರ ಮಾಡಬಾರದು, ಯಾವ ವಾರ ಮಾಡಬೇಕು ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಂಡಿದ್ದಾಗಿದೆ. ತೈಲ ಮಾಲಿಶ್ ಮಾಡುವುದಕ್ಕೂ ಒಂದು ವಾರ, ಸಮಯ ಇದೆ. ನಿಮಗೆ ಬೇಕಾದಾಗ ಮಸಾಜ್ ಮಾಡುವುದು ಸೂಕ್ತವಲ್ಲ ಎನ್ನುತ್ತೆ ಶಾಸ್ತ್ರ.
ಶುಕ್ರವಾರ ತೈಲ ಮಸಾಜ್ ಮಾಡುವುದು ಸೂಕ್ತವಲ್ಲವಂತೆ. ಅಂದು ಶುಕ್ರನ ದಿನವಾಗಿದ್ದು, ಅಂದು ಯಾವುದೇ ಕಾರಣಕ್ಕೂ ತೈಲ ಮಸಾಜ್ ಮಾಡಬೇಡಿ. ಹಾಗೆ ಮಾಡಿದ್ರೆ ಗರ್ಭಧಾರಣೆಗೆ ತೊಂದರೆಯಾಗುತ್ತದೆ. ಹಾಗೆ ಭವಿಷ್ಯದಲ್ಲಿ ದುಃಖ ಅನುಭವಿಸಬೇಕಾಗುತ್ತದೆ ಎಂದು ಶಾಸ್ತ್ರ ಹೇಳಿದೆ.
ಭಾನುವಾರ ಕೂಡ ತಲೆಗೆ ಎಣ್ಣೆ ಹಾಕಬಾರದು. ಹಾಗೆ ಮಾಡಿದ್ರೆ ದೇಹ ತಂಪಾಗುವ ಬದಲು ಉಷ್ಣತೆ ಹೆಚ್ಚಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
ಸೋಮವಾರ ತೈಲ ಮಸಾಜ್ ಮಾಡಿದ್ರೆ ದೈಹಿಕ ನೋವನ್ನು ಅನುಭವಿಸಬೇಕಾಗುತ್ತದೆಯಂತೆ. ಶನಿವಾರ ಎಣ್ಣೆ ಮಸಾಜ್ ಸಂತೋಷ ನೀಡುತ್ತದೆ. ಇದು ಸೂಕ್ತ ವಾರ ಎನ್ನುತ್ತಿದೆ ಶಾಸ್ತ್ರ.
ಮಂಗಳವಾರ ತೈಲ ಮಾಲಿಶ್ ಮಾಡುವುದರಿಂದ ಮರಣವನ್ನು ಆಹ್ವಾನಿಸಿದಂತೆ. ಮಾರಣಾಂತಿಕ ರೋಗಗಳು ಮನುಷ್ಯನನ್ನು ಕಾಡುತ್ತವೆ ಎಂದು ಶಾಸ್ತ್ರ ಹೇಳುತ್ತದೆ.