ಎಷ್ಟೇ ಕತ್ತರಿಸಿದರೂ ಮತ್ತೆ ಮತ್ತೆ ಹುಟ್ಟಿ ಬರುವಂತಹದ್ದು ಉಗುರು ಮತ್ತು ಕೂದಲು.ಆರೋಗ್ಯದ ದೃಷ್ಟಿಯಿಂದ ಇವೆರಡನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅವಶ್ಯಕ. ಹಾಗಂತ ನಿಮಗೆ ಅನುಕೂಲವಾದ ದಿನ ಉಗುರು ತೆಗೆಯುವುದು, ಕೂದಲಿಗೆ ಕತ್ತರಿ ಹಾಕುವುದು ಒಳಿತಲ್ಲ. ಮಹಾಭಾರತದಲ್ಲಿ ಉಗುರು ಮತ್ತು ಕೂದಲನ್ನು ಎಂದು ಕತ್ತರಿಸಿಕೊಂಡರೆ ಶುಭ ಎಂದು ಉಲ್ಲೇಖಿಸಲಾಗಿದೆ.
ಮಕ್ಕಳಿಗೆ ಸ್ಕೂಲ್, ದೊಡ್ಡವರಿಗೆ ಕಚೇರಿ ಕೆಲಸ. ಸ್ವಚ್ಛವಾಗಿ ಹೋಗಬೇಕೆನ್ನುವ ಉದ್ದೇಶದಿಂದ ಅನೇಕರು ಸೋಮವಾರ ಬೆಳಿಗ್ಗೆ ಎದ್ದ ತಕ್ಷಣ ನೇಲ್ ಕಟರ್ ಹಿಡಿತಾರೆ. ಆದ್ರೆ ಸೋಮವಾರದಂದು ಈ ಕೆಲಸ ಮಾಡೋದು ಯೋಗ್ಯವಲ್ಲ. ಸೋಮವಾರ ಕ್ಷೌರ ಮಾಡುವುದರಿಂದ ಮಾನಸಿಕ ಸಮಸ್ಯೆ ಹಾಗೂ ಸಂತಾನ ಸಮಸ್ಯೆ ಎದುರಾಗುತ್ತದೆಯೆಂದು ಪುರಾಣ ಹೇಳುತ್ತದೆ.
ಮಂಗಳವಾರ ಕೂಡ ಕ್ಷೌರಕ್ಕೆ ಶುಭವಲ್ಲ. ಇದರಿಂದ ಆಯಸ್ಸು ಕಡಿಮೆಯಾಗುತ್ತದೆಯೆಂದು ಜೋತಿಷ್ಯ ಹೇಳುತ್ತದೆ.
ಬುಧವಾರ ಉಗುರು ತೆಗೆಯಲು ಹಾಗೂ ಕ್ಷೌರಕ್ಕೆ ಉತ್ತಮವಾದ ದಿನ. ಈ ದಿನ ಉಗುರು ಹಾಗೂ ಕೂದಲು ತೆಗೆಯುವುದರಿಂದ ಸಂಪತ್ತು ಜಾಸ್ತಿಯಾಗುವುದಲ್ಲದೇ, ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.
ಹಾಗೇ ಗುರುವಾರ ಕೂದಲು ಹಾಗೂ ಉಗುರನ್ನು ತೆಗೆಯಬೇಡಿ ಎನ್ನುತ್ತೆ ಶಾಸ್ತ್ರ. ಗುರುವಿನ ದಿನವಾಗಿರುವುದರಿಂದ ಅಶುಭ ಕೆಲಸ ಮಾಡಿದ್ರೆ ಜ್ಞಾನ ವೃದ್ಧಿಯಾಗುವುದಿಲ್ಲ. ಸಂಪತ್ತು ಹಾಗೂ ಸಂತಾನಕ್ಕೂ ತೊಂದರೆ ಎನ್ನುತ್ತದೆ ಶಾಸ್ತ್ರ.
ಶುಕ್ರವಾರ ಈ ಕೆಲಸಕ್ಕೆ ಒಳ್ಳೆಯದು. ಶುಕ್ರದೇವ ಸೌಂದರ್ಯದ ಪ್ರತೀಕ. ಹಾಗಾಗಿ ಅಂದು ದೈಹಿಕ ಸ್ವಚ್ಛತೆ ಮಾಡಿಕೊಂಡರೆ ಶುಕ್ರದೇವ ಪ್ರಸನ್ನನಾಗ್ತಾನೆ. ಮನೆಯಲ್ಲಿ ಲಕ್ಷ್ಮಿ ನೆಲೆಸ್ತಾಳೆ.
ಶನಿವಾರ ಕ್ಷೌರ ಮಾಡಿಕೊಂಡರೆ ಸಾವನ್ನು ಬಳಿಗೆ ಕರೆದಂತೆ.
ಇನ್ನು ರಜಾ ದಿನ ಭಾನುವಾರವನ್ನು ಈ ಕೆಲಸಕ್ಕೆಂದೇ ಅನೇಕರು ಮೀಸಲಿಡ್ತಾರೆ. ಆದ್ರೆ ಭಾನುವಾರ ಈ ಕೆಲಸ ಮಾಡುವುದು ಶುಭಕರವಲ್ಲ ಎನ್ನುತ್ತದೆ ಶಾಸ್ತ್ರ.