alex Certify ಈ ದಿನಾಂಕದಂದು ಬಿಡುಗಡೆಯಾಗಲಿದೆ ಡಾಲಿ ಧನಂಜಯ್ ನಟನೆಯ ‘ಹೊಯ್ಸಳ’ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದಿನಾಂಕದಂದು ಬಿಡುಗಡೆಯಾಗಲಿದೆ ಡಾಲಿ ಧನಂಜಯ್ ನಟನೆಯ ‘ಹೊಯ್ಸಳ’ ಚಿತ್ರ

ಧನಂಜಯ್ ನಟನೆಯ 25ನೇ ಸಿನಿಮಾ 'ಹೊಯ್ಸಳ' ಬಿಡುಗಡೆ ದಿನಾಂಕ ಫಿಕ್ಸ್ – Public TV

ಖಳನಾಯಕನಾಗಿ ಹಾಗೂ ನಾಯಕ ನಟನಾಗಿ ಮಿಂಚುತ್ತಿರುವ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಹೊಯ್ಸಳ ಸಿನಿಮಾ ಮುಂದಿನ ವರ್ಷ ಮಾರ್ಚ್ 30ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡಾಲಿ ಧನಂಜಯ್ ಸದ್ಯ ಹೊಯ್ಸಳ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.

ಇತ್ತೀಚಿಗಷ್ಟೇ ಸ್ಟೈಲಿಶ್ ಸ್ಟಾರ್ ಅರ್ಜುನ್ ನಟನೆಯ ‘ಪುಷ್ಪಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಡಾಲಿ ಧನಂಜಯ್ ಗೆ ಈಗಾಗಲೇ ಟಾಲಿವುಡ್ ಚಿತ್ರರಂಗದಿಂದಲ್ಲೂ ಸಾಕಷ್ಟು ಆಫರ್ ಬಂದಿವೆ.

ವಿಜಯ್ ಎನ್. ಆಕ್ಷನ್ ಕಟ್  ಹೇಳಿರುವ ‘ಹೊಯ್ಸಳ’ ಚಿತ್ರದಲ್ಲಿ ಡಾಲಿ ಧನಂಜಯ್ ಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಅಭಿನಯಿಸಿದ್ದು, ಕೆ ಆರ್ ಜಿ ಸ್ಟುಡಿಯೋಸ್ ಬ್ಯಾನರ್ ನಡಿ ಕಾರ್ತಿಕ್ ಹಾಗೂ ಯೋಗಿರಾಜ್ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...