ಆಹಾರ ಪದಾರ್ಥಗಳನ್ನು ಹೆಚ್ಚು ಕಾಲ ಸಂಗ್ರಹಿಸಲು ಆಗುವುದಿಲ್ಲ. ಆದಕಾರಣ ಅವುಗಳನ್ನು ಸ್ಟೋರ್ ರೂಂನಲ್ಲಿ ಸರಿಯಾದ ರೀತಿಯಲ್ಲಿ ಸಂಗ್ರಹಿಸಿಡಬೇಕು. ಹಾಗಾಗಿ ನೀವು ಸ್ಟೋರ್ ರೂಂನ್ನು ನಿರ್ಮಿಸುವಾಗ ಶಾಸ್ತ್ರದ ಪ್ರಕಾರ ಸರಿಯಾದ ಕಡೆ ನಿರ್ಮಿಸಬೇಕು.
ಶಾಸ್ತ್ರದ ಪ್ರಕಾರ ವಸ್ತುಗಳನ್ನು ಸಂಗ್ರಹಿಸಿಡುವುದರಿಂದ ಎಲ್ಲವೂ ವ್ಯವಸ್ಥಿತವಾಗಿರುತ್ತದೆ. ಮತ್ತು ಉಗ್ರಾಣದಲ್ಲಿ ಎಂದಿಗೂ ಯಾವುದಕ್ಕೂ ಕೊರತೆ ಬರುವುದಿಲ್ಲ. ಹಾಗೇ ವಸ್ತುಗಳನ್ನು ಬಹಳ ಸಮಯದವರೆಗೂ ಸಂಗ್ರಹಿಸಲು ಸರಿಯಾದ ದಿಕ್ಕನ್ನು ಆರಿಸಿದರೆ ಉತ್ತಮ.
ನೀವು ಮನೆಯ ಅಡುಗೆ ಕೋಣೆಯಲ್ಲಿ ಸ್ಟೋರ್ ರೂಂನ್ನು ನಿರ್ಮಿಸಲು ಬಯಸಿದ್ದರೆ ನೈರುತ್ಯ, ದಕ್ಷಿಣ ಅಥವಾ ಪಶ್ಚಿಮ ದಿಕ್ಕನ್ನು ಆರಿಸಿಕೊಳ್ಳಬೇಕು. ಹಾಗೇ ಊಟದ ಹಾಲ್ ಗಾಗಿ ಪಶ್ಚಿಮ ದಿಕ್ಕನ್ನು ಆರಿಸುವುದು ಉತ್ತಮವಾಗಿದೆ.