ಕಾಲಿನ ಹಿಮ್ಮಡಿಯಲ್ಲಿ ಬಿರುಕು ಕಾಣಿಸಿಕೊಳ್ಳುವ ಸಮಸ್ಯೆ ಅನೇಕರಿಗೆ ಇರುತ್ತೆ. ಇದಕ್ಕೆ ಕಾರಣ ಹಲವಾರು. ಸ್ಥೂಲಕಾಯ, ಎತ್ತರದ ಚಪ್ಪಲಿಗಳು, ಶೀತ ವಾತಾವರಣ ಹೀಗೆ ಹಲವಾರು ಕಾರಣಗಳಿಂದ ಕಾಲಿನ ಹಿಮ್ಮಡಿಯಲ್ಲಿ ಬಿರುಕು ಉಂಟಾಗುತ್ತೆ. ಈ ಸಮಸ್ಯೆಗೆ ನಿಮ್ಮ ಮನೆಯಲ್ಲೇ ಸಿಗುವ ಕೆಲ ತರಕಾರಿಗಳು ಪರಿಹಾರ ನೀಡಬಲ್ಲವು.
ಕಾಲಿನ ಬಿರುಕು ಸಮಸ್ಯೆಯನ್ನ ಪರಿಹಾರ ಮಾಡುವಲ್ಲಿ ಈರುಳ್ಳಿ ಬಹಳ ಪ್ರಮುಖ ಪಾತ್ರ ವಹಿಸುತ್ತೆ. ಹಸಿ ಈರುಳ್ಳಿಯನ್ನ ಸೇವನೆ ಮಾಡೋದು ಹಾಗೂ ಈರುಳ್ಳಿ ರಸವನ್ನ ಬಿರುಕು ಕಂಡು ಬಂದ ಜಾಗಕ್ಕೆ ಹಾಕೋದ್ರಿಂದ ತುಂಬಾನೇ ಲಾಭವಿದೆ. ಈರುಳ್ಳಿಯಲ್ಲಿ ಜಿಂಕ್, ಮೆಗ್ನಿಷಿಯಂ ಹಾಗೂ ಕಬ್ಬಿಣಾಂಶ ಹಿಮ್ಮಡಿ ಬಿರುಕಿನ ಸಮಸ್ಯೆಯನ್ನ ವಾಸಿ ಮಾಡುವ ಸಾಮರ್ಥ್ಯ ಹೊಂದಿದೆ.
ಅರ್ಧ ಈರುಳ್ಳಿಯನ್ನ ರಸ ಮಾಡಿ ಇದಕ್ಕೆ ಜೇನುತುಪ್ಪವನ್ನ ಸೇರಿಸಿ. ಆಲಿವ್ ಎಣ್ಣೆ ಇದ್ದರೆ ಅದನ್ನೂ ಕೂಡ ಬಳಕೆ ಮಾಡಬಹುದು. ಈ ಮಿಶ್ರಣವನ್ನ ಹಿಮ್ಮಡಿಗೆ ಸವರಿಕೊಳ್ಳಿ. 20ರಿಂದ 25 ನಿಮಿಷದ ಬಳಿಕ ನೀರಿನಿಂದ ಕಾಲನ್ನ ತೊಳೆದುಕೊಳ್ಳಿ. ಈ ಕ್ರಮವನ್ನ ಅನುಸರಿಸೋದ್ರಿಂದ ನೀವು ಕಾಲು ಒಡಕಿನ ಸಮಸ್ಯೆಯಿಂದ ಮುಕ್ತಿ ಹೊಂದಬಹುದಾಗಿದೆ. ಇದರ ಜೊತೆಯಲ್ಲಿ ನಿತ್ಯ ಹೆಚ್ಚಿನ ಪ್ರಮಾಣದಲ್ಲಿ ನೀರನ್ನ ಸೇವನೆ ಮಾಡಲು ಮರೆಯದಿರಿ.