ಹಣ್ಣುಗಳಿಂದ ಜ್ಯೂಸ್ ತಯಾರಿಸಿ ಕುಡಿದು ಏನೆಲ್ಲಾ ಲಾಭ ಪಡೆದುಕೊಳ್ಳಬಹುದು ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಅದೇ ರೀತಿ ತರಕಾರಿಗಳ ಜ್ಯೂಸ್ ಕೂಡಾ ತಯಾರಿಸಿ, ಹಲವು ಲಾಭಗಳನ್ನು ಪಡೆಯಬಹುದು ಎಂಬುದು ನಿಮಗೆ ತಿಳಿದಿದೆಯೇ?
ದೇಹ ತೂಕ ಇಳಿಸಲು ಮತ್ತು ಬಹುಕಾಲ ಹೊಟ್ಟೆ ತುಂಬಿದ ಅನುಭವ ಪಡೆಯಲು ಚೀನಿಕಾಯಿ ಜ್ಯೂಸ್ ತಯಾರಿಸಿ ಕುಡಿಯಿರಿ. ಇದರಲ್ಲಿ ವಿಟಮಿನ್ ಗಳು ಮಾತ್ರವಲ್ಲ, ಮೆಗ್ನೀಶಿಯಂ, ಐರನ್ ಮತ್ತು ಫಾಸ್ಪರಸ್ ಹೇರಳವಾಗಿದೆ. ಹಾಗಾಗಿ ವಾರಕ್ಕೆರಡು ದಿನ ಚೀನಿಕಾಯಿ ಜ್ಯೂಸ್ ತಯಾರಿಸಿ ಕುಡಿಯಿರಿ.
ಸಕ್ಕರೆ ಬದಲಿಗೆ ಜೇನು, ರುಚಿಗೆ ನಿಂಬೆರಸ ಹಾಗೂ ಪುದೀನಾ ಎಲೆಗಳನ್ನು ಸೇರಿಸಿ.
ಕ್ಯಾರೆಟ್ ಜ್ಯೂಸ್ ನಲ್ಲಿ ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ಹೇರಳವಾಗಿವೆ. ಇವು ದೃಷ್ಟಿ ಸಂಬಂಧಿ ಸಮಸ್ಯೆಗಳನ್ನು ದೂರಮಾಡುತ್ತದೆ. ರಕ್ತಹೀನತೆ ಸಮಸ್ಯೆ ಇರುವವರಿಗೂ ಇದು ಹೇಳಿ ಮಾಡಿಸಿದ ಜ್ಯೂಸ್.
ಹಲವು ಬಗೆಯ ರೋಗಿಗಳಿಗೆ ಬೀಟ್ ರೂಟ್ ಜ್ಯೂಸ್ ತಯಾರಿಸಿ ಕುಡಿಯಲು ಹೇಳುವುದುಂಟು. ಇದರಲ್ಲಿ ಮ್ಯಾಂಗನೀಸ್, ವಿಟಮಿನ್ ಮತ್ತು ಐರನ್ ಗುಣಗಳು ಸಾಕಷ್ಟಿವೆ. ಇದಕ್ಕೆ ಚಿಟಿಕೆ ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಬೆರೆಸಿ ಕುಡಿದರೆ ಬಿಪಿ ಸಮಸ್ಯೆಯೂ ದೂರವಾಗುತ್ತದೆ.