ವೈರಸ್ ಅಥವಾ ಮಾಲ್ವೇರ್ಗಳನ್ನು ಹೊಂದಿರುವ ಫೈಲ್ಗಳನ್ನು ವಾಟ್ಸಾಪ್ ಮೂಲಕ ಶೇರ್ ಮಾಡುವಂತಿಲ್ಲ. ಇಂತಹ ಫೈಲ್ಗಳು ಇತರೆ ಬಳಕೆದಾರರಿಗೂ ಹಾನಿ ಉಂಟು ಮಾಡುತ್ತದೆ. ಇಂತಹ ಸಂದರ್ಭದಲ್ಲಿ ವಾಟ್ಸಾಪ್ ನಿಮ್ಮ ಖಾತೆಯನ್ನು ಬ್ಯಾನ್ ಮಾಡುತ್ತದೆ.
ಅಪರಿಚಿತ ಖಾತೆಗಳಿಗೆ ಮೆಸೇಜ್ ಮಾಡುವುದು :
ಬಳಕೆದಾರರ ಅನುಮತಿಯಿಲ್ಲದೇ ಅವರ ಮೊಬೈಲ್ ಸಂಖ್ಯೆಯನ್ನು ನೀವು ಕಂಡ ಕಂಡಲ್ಲಿ ಶೇರ್ ಮಾಡುವಂತಿಲ್ಲ. ಅಥವಾ ಇಲ್ಲಸಲ್ಲದ ಗ್ರೂಪ್ಗಳಿಗೆ ಬಳಕೆದಾರರ ಅನುಮತಿಯಿಲ್ಲದೇ ಆ್ಯಡ್ ಮಾಡುವುದೂ ಕೂಡ ನಿಮ್ಮ ಖಾತೆಗೆ ಸಂಕಷ್ಟ ನೀಡಬಲ್ಲದು.
ಫೇಕ್ ಖಾತೆಗಳನ್ನು ರಚಿಸುವುದು :
ವಾಟ್ಸಾಪ್ನಲ್ಲಿ ನಕಲಿ ಖಾತೆಗಳನ್ನು ತೆರೆಯುವಂತಿಲ್ಲ. ವಾಟ್ಸಾಪ್ ಬ್ಯುಸಿನೆಸ್ನಲ್ಲಿ ಬಳಕೆದಾರರನ್ನು ವಂಚಿಸಲು ವಂಚಕರು ಸಾಮಾನ್ಯವಾಗಿ ನಕಲಿ ಖಾತೆಗಳನ್ನು ರಚಿಸುತ್ತಾರೆ.
ಬ್ರಾಡ್ಕಾಸ್ಟ್ ಆಯ್ಕೆಗಳ ಅತಿಯಾದ ಬಳಕೆ :
ವಾಟ್ಸಾಪ್ನಲ್ಲಿ ಪದೇ ಪದೇ ಬ್ರಾಡ್ಕಾಸ್ಟ್ ಮೆಸೇಜ್ಗಳನ್ನು ಬಳಕೆ ಮಾಡುವುದರಿಂದ ಜನರು ನಿಮ್ಮ ಮೊಬೈಲ್ ಸಂಖ್ಯೆಯನ್ನು ರಿಪೋರ್ಟ್ ಮಾಡಬಹುದು. ಹಲವಾರು ಬಾರಿ ನಿಮ್ಮ ಮೊಬೈಲ್ ಸಂಖ್ಯೆ ರಿಪೋರ್ಟ್ ಆದಲ್ಲಿ ನಿಮ್ಮ ಖಾತೆ ಬ್ಯಾನ್ ಆಗಲಿದೆ.