ಆರೋಗ್ಯಕರವಾದ ತುಟಿಗಳು ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ಆದರೆ ಸೂರ್ಯನ ಹಾನಿಕಾರಕ ಕಿರಣಗಳಿಂದ, ಶುಷ್ಕ ಗಾಳಿ, ಧೂಳುಗಳಿಂದ ತುಟಿಯು ತನ್ನ ಅಂದವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ತುಟಿಗಳನ್ನು ಆರೈಕೆ ಮಾಡುವುದು ತುಂಬಾ ಮುಖ್ಯ. ಆದರೆ ನೀವು ಮಾಡುವ ಕೆಲವು ತಪ್ಪುಗಳಿಂದಲೂ ಕೂಡ ತುಟಿಗಳ ಅಂದ ಕೆಡುತ್ತದೆ.
*ಒಣ ಮತ್ತು ಸಿಪ್ಪೆ ಎದ್ದ ತುಟಿಗಳಿಂದ ಬಣ್ಣ ಕೆಡುತ್ತದೆ. ಹಾಗಾಗಿ ತುಟಿಗಳನ್ನು ಹೈಡ್ರೇಟ್ ಮಾಡಿ. ನಿಮ್ಮ ತುಟಿಗಳಿಗೆ ಲಿಪ್ ಬಾಮ್ ಅನ್ನು ಹಚ್ಚಿ.
*ಮುಖದ ಚರ್ಮದಂತೆ ತುಟಿಗಳು ಸುಲಭವಾಗಿ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಇದರಿಂದ ಸತ್ತ ಚರ್ಮಗಳು ಉಂಟಾಗುತ್ತದೆ. ಇದು ತುಟಿಗಳ ಹೊಳಪನ್ನು ಕೆಡಿಸುತ್ತದೆ. ಹಾಗಾಗಿ ತುಟಿಗಳಿಗೆ ಸ್ಕ್ರಬ್ ಮಾಡಿ ಸತ್ತ ಚರ್ಮದ ಕೋಶಗಳನ್ನು ನಿವಾರಿಸಿ.
*ತುಟಿಗಳ ಮೇಲೆ ಸೂರ್ಯ ಬಿಸಿಲು ಪ್ರಭಾವ ಬೀರುತ್ತದೆ. ಹಾಗಾಗಿ ಮನೆಯಿಂದ ಹೊರಗಡೆ ಹೋಗುವಾಗ ತುಟಿಗಳಿಗೆ ಯುವಿ ಕಿರಣಗಳಿಂದ ರಕ್ಷಿಸುವ ಲಿಪ್ ಬಾಮ್ ಹಚ್ಚಿಕೊಂಡು ಹೋಗಿ.
*ನಿಯಮಿತವಾಗಿ ಧೂಮಪಾನ ಮಾಡುವುದರಿಂದ ತುಟಿಗಳು ಕಪ್ಪಾಗುತ್ತದೆ. ಸಿಗರೇಟಿನಲ್ಲಿರುವ ನಿಕೋಟಿನ್ ಅಂಶ ತುಟಿಗಳ ಮೇಲೆ ಕುಳಿತು ಅದರ ಬಣ್ಣ ಕಪ್ಪಾಗುತ್ತದೆ.