
ನುಗ್ಗೆ ಸೊಪ್ಪಿನ ಪಲ್ಯ, ನುಗ್ಗೆಕಾಯಿ ಸಾಂಬಾರು ನಾವೆಲ್ಲಾ ತಿಂದಿರುತ್ತೇವೆ. ನುಗ್ಗೆ ಕಾಯಿಯಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿವೆ ಹಾಗೇ ನುಗ್ಗೆಸೊಪ್ಪಿನಲ್ಲೂ ಕ್ಯಾಲ್ಸಿಯಂ ಹೇರಳವಾಗಿದೆ.
ಇನ್ನು ದಿನಾ ಬೆಳಿಗ್ಗೆ ಟೀ ಕಾಫಿ ಕುಡಿಯುವ ಬದಲು ಈ ನುಗ್ಗೆಸೊಪ್ಪಿನಿಂದ ಮಾಡಿದ ಟೀಯನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯಕರವಾದ ಲಾಭವಿದೆ.
ಇದನ್ನು ಮೊರಿಂಗಾ ಟೀ ಎಂದು ಕರೆಯುತ್ತಾರೆ. ಆನ್ ಲೈನ್ ನಲ್ಲಿ ಹಾಗೂ ಸೂಪರ್ ಮಾರ್ಕೆಟ್ ನಲ್ಲಿ ಇದು ಸಿಗುತ್ತದೆ. ಮನೆಯಲ್ಲಿ ನುಗ್ಗೆ ಸೊಪ್ಪಿನ ಮರವಿದ್ದರೆ ಸೊಪ್ಪನ್ನು ತಂದು ನೆರಳಲ್ಲಿ ಒಣಗಿಸಿ. ನಂತರ ನಯವಾಗಿ ಪುಡಿಮಾಡಿಕೊಂಡು ಟೀ ಮಾಡಿಕೊಂಡು ಕುಡಿಯಬಹುದು. ಇಲ್ಲದಿದ್ದರೆ ಕುದಿಯುವ ನೀರಿಗೆ ಸ್ವಲ್ಪ ಸೊಪ್ಪು ಹಾಕಿ ಚೆನ್ನಾಗಿ ಕುದಿಸಿ ನಂತರ ಸೋಸಿಕೊಂಡು ಕುಡಿಯಬಹುದು.
*ನುಗ್ಗೆ ಸೊಪ್ಪಿನ ಪುಡಿಯಿಂದ ಮಾಡಿದ ಟೀ ಕುಡಿಯುವುದರಿಂದ ದೇಹದ ತೂಕ ಇಳಿಕೆಯಾಗುತ್ತದೆ. ಇದರಲ್ಲಿ ಸಾಕಷ್ಟು ವಿಟಮಿನ್ ಹಾಗೂ ಮಿನರಲ್ಸ್ ಇದೆ. ಅದು ಅಲ್ಲದೇ ಕೊಬ್ಬನ್ನು ಕರಗಿಸಲು ಇದು ಸಹಾಯ ಮಾಡುತ್ತದೆ.
* ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಈ ಟೀ ಕುಡಿಯುವುದರಿಂದ ಸಾಕಷ್ಟು ಪ್ರಯೋಜನ ಇದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
*ಮಧುಮೇಹದಿಂದ ಬಳಲುತ್ತಿರುವವರು ಈ ಟೀ ಕುಡಿದರೆ ಶುಗರ್ ಅನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗೇ ಇದರಲ್ಲಿನ ವಿಟಮಿನ್ ಸಿ ಹೇರಳವಾಗಿದೆ. ಮಧುಮೇಹದಿಂದ ಬಳಲುತ್ತಿರುವವರ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡುತ್ತದೆ.
*ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೇರಳವಾಗಿದೆ. ಇದನ್ನು ಸೇವಿಸುವುದರಿಂದ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿನ ಟಾಕ್ಸಿನ್ ಅನ್ನು ಹೊರಹಾಕುತ್ತದೆ.