ಮಳೆಗಾಲದಲ್ಲಿ ಜನರು ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ. ಹೊರಗಿನ ಆಹಾರ ಸೇವನೆಯನ್ನು ಸಂಪೂರ್ಣ ನಿಷೇಧಿಸಬೇಕು. ಡೆಂಗ್ಯೂ ಹೆಚ್ಚಾಗಿ ಕಾಡುವುದ್ರಿಂದ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು.
ಹಣ್ಣುಗಳಲ್ಲಿ ಕಿವಿ ಹಣ್ಣು ಬಹಳ ಒಳ್ಳೆಯದು. ಈ ಹಣ್ಣು ಪ್ಲೇಟ್ಲೆಟ್‌ಗಳನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಡೆಂಗ್ಯೂ ಪೀಡಿತ ವ್ಯಕ್ತಿಗೆ ಇದು ತುಂಬಾ ಅಗತ್ಯವಾಗಿರುತ್ತದೆ. ಕಿವಿ ಹಣ್ಣಿನ ಜ್ಯೂಸ್ ಸೇವನೆಯಿಂದ ಅನೇಕ ಪ್ರಯೋಜನವಿದೆ.
ಅಸ್ತಮಾದ ಅಪಾಯವನ್ನು ಕಡಿಮೆ ಮಾಡುತ್ತದೆ. ಕಿವಿ ಹಣ್ಣಿನ ಜ್ಯೂಸ್ ಅಸ್ತಮಾ ರೋಗಿಗಳಿಗೆ ಪ್ರಯೋಜನಕಾರಿ. ಇದ್ರ ಸೇವನೆಯಿಂದ ಉಸಿರಾಟ ಸಮಸ್ಯೆ ಕಡಿಮೆಯಾಗುತ್ತದೆ.
ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮಳೆಗಾಲದಲ್ಲಿ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ತೊಂದರೆಗಳು ಜನರನ್ನು ಕಾಡುತ್ತದೆ. ಇದನ್ನು ತಪ್ಪಿಸಲು ಕಿವಿ ಹಣ್ಣಿನ ರಸವನ್ನು ಸೇವಿಸಬೇಕು. ಕಿವಿ ಹಣ್ಣಿನಲ್ಲಿರುವ ನಾರಿನ ಪ್ರಮಾಣವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಅನೇಕ ರೀತಿಯ ಗಂಭೀರ ಕಾಯಿಲೆಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ವಿಶೇಷವಾಗಿ ಕೊರೊನಾ ವೈರಸ್ ಸೋಂಕಿನ ಈ ಅವಧಿಯಲ್ಲಿ, ರೋಗನಿರೋಧಕ ಶಕ್ತಿ ಬಹಳ ಮುಖ್ಯ.
ರಕ್ತದೊತ್ತಡವನ್ನು ಸಮತೋಲನಗೊಳಿಸುತ್ತದೆ. ಕಿವಿ ಹಣ್ಣಿನಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಇದ್ದು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಕಣ್ಣಿನ ಆರೈಕೆಗೆ ಉತ್ತಮ. ಜನರು ಮನೆಯಲ್ಲೇ ಕೆಲಸ ಮಾಡುವಾಗ ಕಿವಿ ಹಣ್ಣಿನ ರಸವನ್ನು ಸೇವಿಸಬೇಕು. ಕಂಪ್ಯೂಟರ್ ಪರದೆಯನ್ನು ಸದಾ ನೋಡುವುದ್ರಿಂದ ಕಣ್ಣು ಉರಿ ಕಾಡುತ್ತದೆ.