ನಾವು ತಿನ್ನುವ ಆಹಾರ, ಅನುಸರಿಸುವ ಜೀವನ ಪದ್ಧತಿ ಇವೆಲ್ಲವುಗಳಿಂದ ನಮ್ಮ ದೇಹದಲ್ಲಿ ಟಾಕ್ಸಿನ್ ತುಂಬಿರುತ್ತದೆ. ಆಗಾಗ ನಮ್ಮ ದೇಹವನ್ನು ಡಿಟಾಕ್ಸಿಫಿಕೇಷನ್ ಮಾಡುತ್ತಿರಬೇಕು.
ಇದರಿಂದ ದೇಹದಲ್ಲಿನ ಟಾಕ್ಸಿನ್ ಗಳೆಲ್ಲ ದೂರವಾಗಿ ಅನಾರೋಗ್ಯದ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಸುಲಭವಾಗಿ ಹೇಗೆ ಡಿಟಾಕ್ಸಿಫಿಕೇಷನ್ ಮಾಡಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಟಿಪ್ಸ್.
ಒಂದು ಕಪ್ ಕ್ಯಾರೆಟ್ ಹೋಳುಗಳು, ಒಂದು ಕಪ್ ಬಿಟ್ರೂಟ್, ಒಂದು ಕಪ್ ಕತ್ತರಿಸಿದ ಸೇಬು, ಒಂದು ಸಣ್ಣ ಚೂರು ಶುಂಠಿ ಇವಿಷ್ಟನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ತಿರುಗಿಸಿಕೊಳ್ಳಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ನಂತರ ಇದನ್ನು ಸೋಸಿ ಕುಡಿಯಿರಿ. ಸಕ್ಕರೆ ಸೇರಿಸುವ ಅವಶ್ಯಕತೆ ಇಲ್ಲ. ಇದನ್ನು ಬೆಳಿಗ್ಗೆ ನೀರು ಕುಡಿದು ಅರ್ಧ ಗಂಟೆಯಾದ ನಂತರ ಕುಡಿಯಿರಿ.
ಇದರಿಂದ ರಕ್ತದಲ್ಲಿರುವ ಕಲ್ಮಶಗಳೆಲ್ಲ ದೂರವಾಗುತ್ತದೆ. ಮುಖದ ಅಂದ ಹೆಚ್ಚುತ್ತದೆ. ಮೊಡವೆ, ಕಲೆ ಚುಕ್ಕಿಗಳು ಕ್ರಮೇಣವಾಗಿ ಕಡಿಮೆಯಾಗುತ್ತದೆ. ದೇಹವನ್ನು ಉಲ್ಲಾಸವಾಗಿರಿಸುತ್ತದೆ. ಜೀರ್ಣ ಕ್ರಿಯೆಯನ್ನು ಸರಾಗವಾಗಿಸುತ್ತದೆ.
ಸೇಬು, ಕ್ಯಾರೆಟ್, ಬಿಟ್ರೂಟ್ ಇವು ಮೂರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕಣ್ಣಿನ ದೃಷ್ಟಿ ಹಾಗೂ ಹೃದಯದ ಆರೋಗ್ಯಕ್ಕೆ ಇದು ಉತ್ತಮವಾದ ಜ್ಯೂಸ್.