ಈ ಜಿಲ್ಲೆಯಲ್ಲಿ ಗ್ರಾಮಗಳಿಗೂ ಮಾಡಲಾಗುತ್ತದೆ ವಿವಾಹ…..! ಇದರ ಹಿಂದೆ ಇದೆ ಈ ವಿಶೇಷ ಕಾರಣ 14-02-2022 1:48PM IST / No Comments / Posted In: Latest News, Live News, Special, Life Style ವ್ಯಾಲೆಂಟೈನ್ಸ್ ದಿನವಾದ ವಿಶ್ವದಲ್ಲಿ ಸಾಕಷ್ಟು ಪ್ರೇಮಿಗಳು ತಮ್ಮ ಸಂಗಾತಿಯ ಜೊತೆಯಲ್ಲಿ ಇಂದು ಅದ್ಭುತ ಕ್ಷಣಗಳನ್ನು ಕಳೆಯುತ್ತಾರೆ. ನೀವು ಕೂಡ ಇತಿಹಾಸದಲ್ಲಿ ಸಾಕಷ್ಟು ಅಮರ ಪ್ರೇಮಿಗಳ ಕತೆಗಳನ್ನು ಕೇಳಿರುತ್ತೀರಿ. ಆದರೆ ರಾಜಸ್ಥಾನದ ಜಿಲ್ಲೆಯೊಂದರಲ್ಲಿ ಇರುವ ಲವ್ ಸ್ಟೋರಿಯು ಎಲ್ಲಕ್ಕಿಂತ ಭಿನ್ನವಾಗಿದೆ. ರಾಜಸ್ಥಾನದ ಜಲಾವರ್ ಜಿಲ್ಲೆಯ ಸುಮಾರು 44 ಗ್ರಾಮಗಳು ಸಂತೋಷದಿಂದ ವಿವಾಹವಾದ ದಂಪತಿಯಂತಿವೆ. ಅರ್ರೆ..! ಇದೇನಿದು ಗ್ರಾಮಗಳ ನಡುವೆ ಮದುವೆ ಎಂದೆನಿಸುತ್ತಿರಬೇಕಲ್ಲವೇ..? ಆದರೆ ಇಲ್ಲಿನ ಈ ಗ್ರಾಮಗಳ ಇತಿಹಾಸವು ಹೇಳುವ ಪ್ರಕಾರ, ಇಲ್ಲಿ ಹಿಂದೆ ವಾಸವಿದ್ದ ಗ್ರಾಮಸ್ಥರು ಕೆಲವೊಂದು ಗ್ರಾಮಗಳಿಗೆ ಪುಲ್ಲಿಂಗದ ಹೆಸರು ಹಾಗೂ ಇನ್ನೂ ಕೆಲವು ಗ್ರಾಮಗಳಿಗೆ ಸ್ತ್ರೀಲಿಂಗದ ಹೆಸರನ್ನು ಇಟ್ಟಿದ್ದರು. ಉದಾಹರಣೆಗೆ ಒಂದು ಹಳ್ಳಿಗೆ ಧನೋಡ ಎಂದು ಹೆಸರಿಟ್ಟರೆ ಅದರ ಪಕ್ಕದ ಗ್ರಾಮಕ್ಕೆ ಧನೋಡಿ ಎಂದು ಹೆಸರಿಡಲಾಗಿದೆ. ಎರಡೂ ಗ್ರಾಮಗಳ ನಡುವಿನ ಜನರಲ್ಲಿ ಒಳ್ಳೆಯ ಭಾವನೆ ಇರಬೇಕು ಎಂಬ ಕಾರಣಕ್ಕೆ ಹಿರಿಯರು ಗ್ರಾಮಗಳಿಗೆ ಈ ರೀತಿ ಹೆಸರಿಟ್ಟಿದ್ದಾರೆ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ. ಹಿರಿಯರ ಆಶಯದಂತೆ ಈ ಹಳ್ಳಿಗಳಲ್ಲಿ ಗ್ರಾಮಸ್ಥರ ನಡುವೆ ಯಾವುದೇ ಜಗಳ, ವೈಮನಸ್ಯ ಎಂಬುದು ಇಲ್ಲವೇ ಇಲ್ಲ. ಅಲ್ಲದೇ ದಂಪತಿ ಹಳ್ಳಿಗಳ ಜನತೆ ಒಬ್ಬರಿಗೊಬ್ಬರಿಗೆ ಸಹಾಯ ಮಾಡಿಕೊಳ್ಳುತ್ತಾರೆ. ದುಃಖ, ಸಂತೋಷಗಳಲ್ಲಿ ಒಬ್ಬರಿಗೊಬ್ಬರು ಇರುತ್ತಾರೆ. ಈ ದಂಪತಿ ಗ್ರಾಮಗಳ ಪಟ್ಟಿ ಹೀಗಿದೆ ನೋಡಿ : ಬಾರ್ಬೆಲಾ-ಬಾರ್ಬೆಲಿ ಧನೋಡ-ಧನೋಡಿ ಭಿಲ್ವಾರ-ಭಿಲ್ವಾರಿ ಕನ್ವಾರ-ಕನ್ವಾರಿ ಸೆಮ್ಲಾ-ಸೆಮ್ಲಿ ಡೋಬ್ರಾ-ಡೋಬ್ರಿ ನೋಬಲ್-ನೋಬಲಿ ಹಟೋಲ-ಹಟೋಲಿ ರಾಳಯ್ತಾ- ರಾಲಯ್ತಿ ಅಲೋಡ-ಅಲೋಡಿ