ಹಿಂದೂ ಧರ್ಮೀಯರಿಗೆ ಸ್ವಸ್ತಿಕ್ ಚಿನ್ಹೆ ಅಂತ್ಯಂತ ಮಂಗಳಕರ ಎಂಬ ನಂಬಿಕೆ ಇದೆ. ಇದನ್ನು ಲಕ್ಷ್ಮಿ ಹಾಗೂ ಗಣಪತಿಯ ಪ್ರತಿರೂಪವಾಗಿ ನಂಬುತ್ತಾರೆ.
ಸ್ವಸ್ತಿಕ್ ಚಿನ್ಹೆ ಬಹಳ ಪುರಾತನವಾದದ್ದು. ವಾಸ್ತು ದೋಷವನ್ನು ಸರಿಪಡಿಸುವ ಈ ಚಿನ್ಹೆ ಸಾಮಾನ್ಯವಾಗಿ ಮನೆಯ ಮುಂಬಾಗಿಲಿಗೆ, ತುಳಸಿ ಕಟ್ಟೆಯ ಮೇಲೆ ಸ್ಥಾಪನೆ ಮಾಡುವುದು ನೀವು ಗಮನಿಸಿರಬಹುದು.
ಸ್ವಸ್ತಿಕ್ ಚಿನ್ಹೆ ಮನೆಯ ವಾಸ್ತು ದೋಷವನ್ನು ಸರಿಪಡಿಸುತ್ತದೆ. ಆದ್ದರಿಂದ ಮನೆಯ ಮುಖ್ಯ ದ್ವಾರದಲ್ಲಿ ಇದನ್ನು ಬರೆಯುವುದು ಒಳ್ಳೆಯದು. ಇದು ಸಕಾರಾತ್ಮಕ ಶಕ್ತಿಯ ಸಂಕೇತ. ಬಾಗಿಲ ಮೇಲೆ ಇದನ್ನು ಬರೆಯುವುದರಿಂದ ಯಾವುದೇ ಕೆಟ್ಟ ದೋಷಗಳು ಮನೆಯ ಒಳಗೆ ಪ್ರವೇಶಿಸುವುದನ್ನು ತಡೆಯುತ್ತದೆ.
ಸ್ವಸ್ತಿಕ್ ಚಿನ್ಹೆ ಕೆಂಪು ಬಣ್ಣದಲ್ಲಿ ಬರೆದರೆ ಹೆಚ್ಚು ಶ್ರೇಯಸ್ಕರ. ಈ ಚಿನ್ಹೆಯನ್ನು ತಪ್ಪಾಗಿ ಬರೆಯಕೂಡದು. ಹಾಗೆ ತುಳಿಯುವ ಜಾಗದಲ್ಲಿ ಹಾಕಬಾರದು. ಮನೆಯ ನೆಮ್ಮದಿ, ಶಾಂತಿ ಹಾಗೂ ಸಮೃದ್ಧಿಗಾಗಿ ಈ ಚಿನ್ಹೆ ಬರೆಯುವುದರ ಜೊತೆಗೆ ಅಂಗಡಿಗಳಲ್ಲೂ ಇದನ್ನು ಬಳಸುತ್ತಾರೆ. ಸ್ವಂತ ವ್ಯಾಪಾರ ಮಾಡುವ ಯಾರೇ ಆದರೂ ಈ ಚಿನ್ಹೆಯನ್ನು ಸರಿಯಾದ ಕ್ರಮದಲ್ಲಿ ಬರೆದು ಪೂಜಿಸಿದರೆ ಧನ ಲಾಭ ಖಚಿತ.