
ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಇತ್ತೀಚಿನ ಆಪ್ಟಿಕಲ್ ಚಿತ್ರ ಕುದುರೆಗಳದ್ದಾಗಿದೆ. ಹಿಮಭರಿತ ಪರ್ವತಗಳಲ್ಲಿ ನಿಂತಿರುವ ಕುದುರೆಗಳ ಗುಂಪನ್ನು ಫೋಟೋದಲ್ಲಿ ನೋಡಬಹುದು. ಫೋಟೋದಲ್ಲಿ ನೀವು ಎಷ್ಟು ಕುದುರೆಗಳನ್ನು ಗುರುತಿಸಿದ್ದೀರಿ? ನಾಲ್ಕು? ಐದು? ಏಳು?
ಕಿಡ್ಸ್ ಎನ್ವಿರಾನ್ಮೆಂಟ್ ಕಿಡ್ಸ್ ಹೆಲ್ತ್ನ ಪಝಲ್ ತಜ್ಞರು ಹೇಳುವ ಪ್ರಕಾರ, ಚಿತ್ರದಲ್ಲಿ ಏಳು ಕುದುರೆಗಳಿವೆ. ಇದರಲ್ಲಿ ಕುದುರೆಯ ತಲೆ ಮತ್ತು ಹಿಂಭಾಗದಂತಹ ಕೆಲವು ಭಾಗಶಃ ಕುದುರೆಗಳಿವೆ. ಚಿತ್ರವನ್ನು ಸರಿಯಾಗಿ ಗಮನಿಸಿದ್ರೆ, ಎಡಭಾಗದಲ್ಲಿ ಒಂದು ಕುದುರೆ ಹೊರಗೆ ನೋಡುತ್ತಿರುವುದನ್ನು ನೋಡಬಹುದು.
ಮಧ್ಯದಲ್ಲಿ ನಾಲ್ಕು ಮುಖಗಳು ಒಟ್ಟಿಗೆ ಗುಂಪಿನಲ್ಲಿ ಇವೆ. ಆ ಗುಂಪಿನಲ್ಲಿ ಒಂದರ ಕಂದು ಮೂಗು (ಎಡದಿಂದ ಎರಡನೆಯದು) ಕೆಳಗೆ ಬಾಗಿದ ಕುದುರೆಯ ಮುಖದ ಬಲಭಾಗವನ್ನು ಆವರಿಸುತ್ತದೆ. ಬಲಕ್ಕೆ ಸಣ್ಣ ಕುದುರೆಯು ಪಕ್ಕಕ್ಕೆ ನಿಂತಿದೆ ಮತ್ತು ಅದರ ಮೇಲೆ ಏಳನೆಯ ಕುದುರೆಯ ಹಿಂಭಾಗವಿದೆ ಎಂದು ಪಝಲ್ ತಜ್ಞರು ಗುರುತಿಸಿದ್ದಾರೆ. ಇನ್ನು ಚಿತ್ರ ಕಲಾವಿದ ಬೆವ್ ಡೂಲಿಟಲ್ ಅವರು ಇದನ್ನು ರಚಿಸಿದ್ದು, ಚಿತ್ರದಲ್ಲಿ ಕೇವಲ ಐದು ಕುದುರೆಗಳಿವೆ ಎಂದು ಡೂಲಿಟಲ್ ಹೇಳಿದ್ದಾರೆ.