alex Certify ಈ ಘಟನೆ ನಡೆದ್ರೆ ದೇವರ ಕೃಪೆ ನಿಮ್ಮ ಮೇಲಿದೆ ಎಂದರ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಘಟನೆ ನಡೆದ್ರೆ ದೇವರ ಕೃಪೆ ನಿಮ್ಮ ಮೇಲಿದೆ ಎಂದರ್ಥ

Image result for sign-of-spiritual-gifted-person dream

ಭಗವಂತನ ಕೃಪೆಯಿದ್ದರೆ ಜೀವನ ಸುಖಕರವಾಗಿರುತ್ತದೆ. ಯಾವುದಕ್ಕೂ ಕೊರತೆ ಎದುರಾಗುವುದಿಲ್ಲ. ಸದಾ ಭಗವಂತನ ಕೃಪೆಯಿರುವ ವ್ಯಕ್ತಿಗಳು ಸಿಗೋದು ಅಪರೂಪ. ಕೆಲವೊಂದು ಲಕ್ಷಣಗಳು ಭಗವಂತನ ಆಶೀರ್ವಾದ ನಮ್ಮ ಮೇಲಿದೆ ಎಂಬುದನ್ನು ತಿಳಿಸುತ್ತದೆ.

ಪದೇ ಪದೇ ವಿಚಿತ್ರವಾದ, ಭಯ ಹುಟ್ಟಿಸುವ ಸ್ವಪ್ನ ಬೀಳುತ್ತಿದ್ದರೆ. ಕೆಲವೊಂದು ಸಿನಿಮಾದಂತೆ ಅಥವಾ ಘಟನೆಯಂತ ಸ್ವಪ್ನ ಬಿದ್ದಲ್ಲಿ ಅದು ನಿಜವಾದ್ರೆ ಭಯಪಡಬೇಕಾಗಿಲ್ಲ. ಸ್ವಪ್ನ ಬಿದ್ದ ನಂತ್ರ ತಕ್ಷಣ ಎಚ್ಚರವಾದಾಗ ಬೆವರು ಬಂದ್ರೆ, ಇಲ್ಲ ಕಣ್ಣಲ್ಲಿ ನೀರು ಬಂದ್ರೆ ಇದು ವಿಶೇಷ ದೈವ ಕೃಪೆ ನಿಮ್ಮ ಮೇಲಿದೆ ಎಂದರ್ಥ.

ಕೆಲವೊಂದು ಕೆಲಸಗಳನ್ನು ಮಾಡುವ ಮುನ್ನ ಎಲ್ಲ ತಯಾರಿಯಾದ್ರೂ ಕೊನೆ ಕ್ಷಣದಲ್ಲಿ ಅಂತರಂಗ ಹಿಂದೇಟು ಹಾಕುತ್ತದೆ. ಯಾವುದೇ ಪೂರ್ವಾಪರ ಗೊತ್ತಿಲ್ಲದೆ ಧೈರ್ಯ ಮಾಡಿ ಅಂತರಂಗದ ಮಾತು ಕೇಳಿದಾಗ ನೀವಿಟ್ಟ ಹೆಜ್ಜೆ ಸರಿಯಾಗಿರುತ್ತದೆ. ಪದೇ ಪದೇ ಹೀಗಾದಲ್ಲಿ ನಿಮ್ಮ ಅಂತರ್ದೃಷ್ಟಿ ಜಾಗೃತವಾಗಿದೆ ಎಂದರ್ಥ. ಜೊತೆಗೆ ನಿಮ್ಮ ಮೇಲೆ ದೇವರ ಕೃಪೆಯಿದೆ ಎಂದರ್ಥ.

ಎಂಥ ಕಷ್ಟದ ಪರಿಸ್ಥಿತಿಯಲ್ಲೂ ನಿಮ್ಮ ಮನಸ್ಸು ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಲ್ಲಿದ್ದರೆ ಹಾಗೂ ನಿರೀಕ್ಷೆಯಂತೆ ಒಳ್ಳೆಯದಾದಲ್ಲಿ ನಿಮ್ಮ ಮೇಲೆ ದೇವರ ಕೃಪೆಯಿದೆ ಎಂದೇ ಅರ್ಥ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...