ಮೆಲ್ಬೋರ್ನ್- ಆಸ್ಟ್ರೇಲಿಯಾದಲ್ಲಿ ಮಹಿಳೆ ಒಬ್ಬರನ್ನ ಕೊಂದಿರುವ ವ್ಯಕ್ತಿಯೊಬ್ಬನನ್ನ ಕ್ವೀನ್ಸ್‌ಲ್ಯಾಂಡ್ ಪೊಲೀಸರು ಹುಡುಕುತ್ತಿದ್ದಾರೆ. ಈತನನ್ನು ಹುಡುಕಿಕೊಟ್ಟವರಿಗೆ ಒಂದು ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 8 ಕೋಟಿ ಬಹುಮಾನ ಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಹೌದು, 38 ವರ್ಷದ ರಾಜ್‌ವಿಂದರ್ ಸಿಂಗ್ ಕೊಲೆ ಮಾಡಿರುವ ವ್ಯಕ್ತಿ. ಈತ ಭಾರತ ಮೂಲದ ವ್ಯಕ್ತಿ ಎಂದು ಹೇಳಲಾಗಿದೆ. ಈತ ಆಸ್ಟ್ರೇಲಿಯಾದಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರಂತೆ. 2018ರಲ್ಲಿ ಕಡಲತೀರದಲ್ಲಿ ಆಸ್ಟ್ರೇಲಿಯನ್ ಮಹಿಳೆಯನ್ನು ಕೊಂದಿದ್ದಾರಂತೆ. ನಂತರ ಕುಟುಂಬ ಸಮೇತರಾಗಿ ಭಾರತದಲ್ಲಿ ಬಂದು ತಲೆ ಮರೆಸಿಕೊಂಡಿರುವುದಾಗಿ ಹೇಳಲಾಗುತ್ತಿದೆ.
ಮಹಿಳೆ ಹತ್ಯೆಯಾದ ಮರುದಿನ ಅಂದರೆ ಅಕ್ಟೋಬರ್ 22 ರಂದು ಕೇರ್ನ್ಸ್‌ನಿಂದ ಹೊರಟಿದ್ದಾರೆ ಈ ನರ್ಸ್. ಅಲ್ಲಿಂದ 23ರಂದು ಸಿಡ್ನಿಗೆ ಬಂದು ನಂತರ ಭಾರತಕ್ಕೆ ಹೋಗಿದ್ದಾರಂತೆ. ಈ ಖಚಿತ ಮಾಹಿತಿಯ ಮೇರೆಗೆ ಭಾರತದಲ್ಲಿ ಈ ವ್ಯಕ್ತಿ ಇದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಭಾರತದ ಅಧಿಕಾರಿಗಳಿಗೆ ಈ ವಿಚಾರ ತಿಳಿಸಿರುವ ಪೊಲೀಸರು ಅವರ ಸಹಕಾರ ಕೂಡ ಕೇಳಿದ್ದಾರೆ.