ಗಂಡ – ಹೆಂಡತಿ ಮಧ್ಯೆ ಪ್ರೀತಿ ಇದ್ದರೂ ಎಷ್ಟೋ ಬಾರಿ ಜಗಳವಾಗುತ್ತದೆ. ಗಂಡ ಮತ್ತು ಹೆಂಡತಿಯ ನಡುವೆ ಉತ್ತಮ ಸಂಬಂಧವಿದ್ದರೂ ಮಲಗುವ ಕೋಣೆ ವಾಸ್ತು ದೋಷದಿಂದ ವೈವಾಹಿಕ ಜೀವನದಲ್ಲಿ ಸಂಪೂರ್ಣ ತೃಪ್ತಿ ಸಿಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ವಾಸ್ತು ದೋಷದ ಬಗ್ಗೆ ತಿಳಿದು ನಡೆಯುವುದು ಅಗತ್ಯ.
ನಿದ್ದೆ ಮಾಡುವಾಗ ಗಂಡ ಮತ್ತು ಹೆಂಡತಿ ಪ್ರತಿಬಿಂಬ ಕನ್ನಡಿಯಲ್ಲಿ ಕಾಣಬಾರದು. ಇದು ಅವರ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತರುತ್ತದೆ.
ಕನ್ನಡಿಯಿಂದಾಗಿ ಇಬ್ಬರ ಮಧ್ಯೆ ಉದ್ವಿಗ್ನತೆ ಹೆಚ್ಚಾಗುತ್ತದೆ. ಇದು ದಾಂಪತ್ಯದಲ್ಲಿ ಇನ್ನೊಬ್ಬರ ಪ್ರವೇಶಕ್ಕೆ ಕಾರಣವಾಗಬಹುದು. ಗಂಡ ಮತ್ತು ಹೆಂಡತಿ ರಾತ್ರಿ ಮಲಗುವಾಗ ಕನ್ನಡಿಯನ್ನು ಮುಚ್ಚಬೇಕು.
ರಾತ್ರಿ ಮಲಗುವಾಗ ಪತಿ – ಪತ್ನಿ ತಲೆ ಪೂರ್ವಕ್ಕೆ ಮತ್ತು ಪಾದಗಳು ಪಶ್ಚಿಮಕ್ಕೆ ಇರಬೇಕು. ಈ ದಿಕ್ಕಿನಲ್ಲಿ ಮಲಗಲು ಸಾಧ್ಯವಾಗದಿದ್ದರೆ ತಲೆ ದಕ್ಷಿಣ ದಿಕ್ಕಿಗೆ ಹಾಗೂ ಪಾದಗಳು ಉತ್ತರ ದಿಕ್ಕಿಗೆ ಬರುವಂತೆ ನೋಡಿಕೊಳ್ಳಬೇಕು.
ಈಶಾನ್ಯ ದಿಕ್ಕು ದೇವರು ಮತ್ತು ದೇವತೆಗಳ ಸ್ಥಳವಾಗಿದೆ. ಆದ್ದರಿಂದ ಮಲಗುವ ಕೋಣೆ ಈ ದಿಕ್ಕಿನಲ್ಲಿ ಇರಬೇಕು.
ರಾಧಾ – ಕೃಷ್ಣರ ಪ್ರೀತಿಯ ಫೋಟೋವನ್ನು ನಿಮ್ಮ ಕೋಣೆಯಲ್ಲಿ ಇಡಬೇಕು ಎಂಬುದನ್ನು ನೆನಪಿನಲ್ಲಿಡಿ.
ಮಲಗುವ ಕೋಣೆಯಲ್ಲಿ ಹಣವಿದ್ದರೆ ಅದನ್ನು ಉತ್ತರ ದಿಕ್ಕಿಗಿಡಿ.
ಮಲಗುವ ಕೋಣೆಯಲ್ಲಿ ಎರಡು ಸುಂದರವಾದ ಅಲಂಕಾರಿಕ ಮಡಕೆಗಳನ್ನು ಗಂಡ ಮತ್ತು ಹೆಂಡತಿಯ ಸಂಕೇತವಾಗಿ ಇರಿಸಿ. ಇದರೊಂದಿಗೆ ಯಾವಾಗಲೂ ಮಲಗುವ ಕೋಣೆಯನ್ನು ಅಲಂಕರಿಸಿ. ಪಾದಗಳ ಬಳಿ ಸ್ಫಟಿಕವನ್ನು ಇಡಿ.