ಕೆಟ್ಟ ಕೆಲಸ ಮಾಡಿದ್ರೆ ಮಾತ್ರ ಪಾಪ ಪ್ರಾಪ್ತಿಯಾಗೋದಿಲ್ಲ. ಕೆಲವೊಂದು ವಸ್ತುಗಳನ್ನು ನೋಡಿದ್ರೂ ಪಾಪ ಅಂಟಿಕೊಳ್ಳುತ್ತದೆ. ಸುತ್ತಮುತ್ತಲಿರುವ ವಸ್ತುಗಳು ನಮ್ಮ ಕಣ್ಣಿಗೆ ಬಿದ್ರೆ ಪಾಪ ಬೆನ್ನು ಹತ್ತುತ್ತದೆ. ಹಾಗಾಗಿ ಕೆಲವೊಂದು ವಸ್ತು, ಘಟನೆಗಳನ್ನು ನೋಡದಿರುವುದು ಒಳ್ಳೆಯದು.
ಅಶ್ವತ್ಥ ಮರದಲ್ಲಿ ದೇವಾನುದೇವತೆಗಳು ವಾಸವಾಗಿರುತ್ತವೆ. ಅಶ್ವತ್ಥ ಮರವನ್ನು ಕಡಿಯುವುದು ಮಹಾ ಪಾಪ. ಮರ ಕಡಿಯುವುದನ್ನು ನೋಡುವುದು ಕೂಡ ಒಳ್ಳೆಯದಲ್ಲ.
ದೇವಾನುದೇವತೆಗಳನ್ನು ತೆಗಳುವುದು ಕೂಡ ಮಹಾಪಾಪ. ಭಗವಂತನಿಗೆ ಬೈಯ್ಯುವ ವ್ಯಕ್ತಿಯನ್ನು ನೋಡಬಾರದು. ಹಾಗೆ ಆತನಿಗೆ ನಮಸ್ಕಾರ ಮಾಡಬಾರದು.
ಮಾತು ಮಾತಿಗೆ ಜಗಳಕ್ಕಿಳಿಯುವ ವ್ಯಕ್ತಿ ಸ್ನೇಹ ಬೆಳೆಸಬಾರದು. ಜಗಳ ಮಾಡುವ ವ್ಯಕ್ತಿಯ ಸಹವಾಸಕ್ಕೆ ಬರುವ ವ್ಯಕ್ತಿ ಕೂಡ ಕೆಟ್ಟ ಬೈಗುಳ ಕಲಿಯುತ್ತಾನೆ. ಬೇರೆಯವರ ಜೊತೆ ಜಗಳಕ್ಕಿಳಿಯುತ್ತಾನೆ. ಇದ್ರಿಂದ ಪಾಪವನ್ನು ಮೈಮೇಲೆಳೆದುಕೊಳ್ಳುತ್ತಾನೆ.
ದೇವಾನುದೇವತೆಗಳ ಮೂರ್ತಿಯನ್ನು ಎಸೆಯುವ, ಮುರಿಯುವ ವ್ಯಕ್ತಿಯನ್ನೂ ನೋಡಬಾರದು. ಆತನ ಸ್ನೇಹ ಬೆಳೆಸಬಾರದು.