ಬಡತನವನ್ನು ಹೋಗಲಾಡಿಸಿಕೊಳ್ಳಬೇಕು ಅಂದ್ರೆ ಕೇವಲ ದುಡಿಮೆ ಮಾತ್ರ ಸಾಲದು, ಬದುಕಿನಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಅಂತಾ ಹಿಂದೂ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.
ಆರ್ಥಿಕ ವೃದ್ಧಿಯ ಜೊತೆಗೆ ಆರೋಗ್ಯ ಮತ್ತು ಸಂತೋಷದ ಬದುಕು ನಿಮ್ಮದಾಗಬೇಕು ಅಂದ್ರೆ ಅವನ್ನೆಲ್ಲ ನೀವು ಅನುಸರಿಸಿಕೊಳ್ಳಬೇಕು. ಸಂಜೆ ಸಮಯದಲ್ಲಿ ನೀವು ಮಾಡಬಾರದಂತಹ ಕೆಲಸಗಳು ಇವು. ಇದನ್ನು ಮಾಡಿದ್ರೆ ನಿಮಗೆ ಆರ್ಥಿಕ ನಷ್ಟವಾಗುವ ಸಾಧ್ಯತೆಗಳಿರುತ್ತವೆ.
ಸಂಜೆ ಸಮಯದಲ್ಲಿ ಸ್ವಚ್ಛತೆಯ ಕೆಲಸಗಳು ಬೇಡ. ಕಸ ಗುಡಿಸೋದು, ನೆಲ ಒರೆಸೋದು ಮಾಡಬೇಡಿ. ಈ ಸಮಯ ಧಾರ್ಮಿಕ ಕೆಲಸಗಳಿಗೆ ಮೀಸಲಾಗಿದೆ ಅಂತಾ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಸಂಧ್ಯಾಕಾಲದಲ್ಲಿ ಲಕ್ಷ್ಮಿಯನ್ನು ಆರಾಧಿಸಿ, ಮಂತ್ರಗಳನ್ನು ಪಠಿಸಿ. ಅದನ್ನು ಬಿಟ್ಟು ಸಂಧ್ಯಾಕಾಲದಲ್ಲಿ ಕಸ ಗುಡಿಸಿದ್ರೆ ಧನಾತ್ಮಕ ಶಕ್ತಿಯನ್ನೇ ಹೊಡೆದೋಡಿಸಿದಂತೆ.
ಸಾಯಂಕಾಲ ರೊಮ್ಯಾನ್ಸ್, ಸೆಕ್ಸ್ ಅಥವಾ ಇನ್ಯಾವುದೇ ರೀತಿಯ ನಿಕಟತೆ ಬೇಡ. ಸಂಜೆ ಸಮಯದಲ್ಲಿ ಲಕ್ಷ್ಮಿ ಭೂಮಿಗೆ ಬರ್ತಾಳಂತೆ. ನೀವು ನಿಕಟ ಸ್ಥಿತಿಯಲ್ಲಿರುವುದನ್ನು ಲಕ್ಷ್ಮಿ ದೇವತೆ ನೋಡಿದ್ರೆ ಆಕೆ ನಿಮ್ಮಿಂದ ದೃಷ್ಟಿಯನ್ನು ಬೇರೆಡೆಗೆ ಹರಿಸುತ್ತಾಳಂತೆ. ಇದರಿಂದ ನೀವು ಹಣ ಕಳೆದುಕೊಳ್ಳಬಹುದು.
ಸಾಯಂಕಾಲ ಯಾವುದೇ ಕಾರಣಕ್ಕೂ ನಿದ್ದೆ ಮಾಡಬೇಡಿ, ಇದು ನಿಮ್ಮ ಮನಸ್ಸನ್ನು ದುರ್ಬಲಗೊಳಿಸುತ್ತದೆ. ಜ್ಞಾಪಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ಬೊಜ್ಜು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತವೆ.
ಸಾಯಂಕಾಲದ ಸಮಯದಲ್ಲಿ ಹಾಗೂ ಏಕಾದಶಿಯಂದು ತುಳಸಿ ಎಲೆಗಳನ್ನು ಕೀಳಬಾರದು. ಹಾಗೇನಾದ್ರೂ ಮಾಡಿದ್ರೆ ನೀವು ಬಡತನವನ್ನು ಆಹ್ವಾನಿಸಿದಂತೆ. ಅಷ್ಟೇ ಅಲ್ಲ ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಸಂಜೆ ಹೊತ್ತಿನಲ್ಲಿ ಎಲೆಗಳನ್ನು ಕಿತ್ತರೆ ಗಿಡ ಸತ್ತು ಹೋಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.