ಮನುಷ್ಯ ಹುಟ್ಟಿದ ಮೇಲೆ ಸಾವು ನಿಶ್ಚಿತ. ಆರೋಗ್ಯವಾಗಿ ನೂರು ಕಾಲ ಬಾಳಬೇಕೆಂಬುದು ಎಲ್ಲರ ಬಯಕೆ. ಆದ್ರೆ ನಾವು ಮಾಡುವ ಕೆಲವೊಂದು ಕೆಲಸಗಳು ನಮ್ಮ ಆಯಸ್ಸನ್ನು ಕಡಿಮೆ ಮಾಡುತ್ತದೆ. ಮಹಾಭಾರತದಲ್ಲಿ ನಾವು ಮಾಡುವ ಯಾವ ಕೆಲಸ ನಮ್ಮ ಆಯಸ್ಸನ್ನು ಕಡಿಮೆ ಮಾಡುತ್ತೆ ಎಂಬುದನ್ನು ಹೇಳಲಾಗಿದೆ.
ಮಹಾಭಾರತದ ಪ್ರಕಾರ, ಸೂರ್ಯೋದಯವಾದ ಮೇಲೂ ಮಲಗುವ ವ್ಯಕ್ತಿ ಮತ್ತು ಅದಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳದ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತದೆ.
ಶಾಸ್ತ್ರದಲ್ಲಿ ಯಾವ ವಸ್ತುವನ್ನು ಹಲ್ಲಿನಲ್ಲಿ ಕಚ್ಚಬಾರದು ಎಂದು ಬರೆದಿದೆಯೋ ಅದನ್ನು ಹಲ್ಲಿನಲ್ಲಿ ಕಚ್ಚಿದ್ರೆ ಆಯಸ್ಸು ಕಡಿಮೆಯಾಗುತ್ತದೆ.
ಹಗಲು, ಸೂರ್ಯಾಸ್ತದ ವೇಳೆ, ಗ್ರಹಣ ಕಾಲದಲ್ಲಿ ಮಲಗುವ ವ್ಯಕ್ತಿಯ ಆಯಸ್ಸು ಕೂಡ ಕಡಿಮೆಯಾಗುತ್ತದೆ.
ಎಂದೂ ಕೋಪ ಮಾಡಿಕೊಳ್ಳದ, ಸತ್ಯವನ್ನೇ ಹೇಳುವ, ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುವ ವ್ಯಕ್ತಿ 100 ವರ್ಷ ಬದುಕುತ್ತಾನೆಂದು ಗ್ರಂಥದಲ್ಲಿ ಹೇಳಲಾಗಿದೆ.
ಕೂದಲು ಕತ್ತರಿಸುವುದು, ಕಣ್ಣಿಗೆ ಕಾಡಿಗೆ ಹಚ್ಚುವುದು, ಹಲ್ಲುಜ್ಜಿ ಸ್ನಾನ ಮಾಡುವುದು ಹಾಗೂ ದೇವರ ಪೂಜೆ ಮಾಡುವ ಕೆಲಸವನ್ನು ಬೆಳಿಗ್ಗೆ 9 ಗಂಟೆಯೊಳಗೆ ಮಾಡಬೇಕು. ಸಮಯಕ್ಕೆ ಸರಿಯಾಗಿ ಮಾಡದ ವ್ಯಕ್ತಿ ಬೇಗ ಸಾವನ್ನಪ್ಪುತ್ತಾನೆ.
ಉಗುರನ್ನು ಹಲ್ಲಿನಲ್ಲಿ ಕಚ್ಚುವ, ಮೂಗಿಗೆ ಕೈ ಹಾಕುತ್ತಿರುವ, ಸದಾ ಅಶುದ್ಧವಾಗಿರುವ ವ್ಯಕ್ತಿ ಬೇಗ ಇಹಲೋಕ ತ್ಯಜಿಸುತ್ತಾನೆ.
ಬೇರೆ ಮಹಿಳೆಯರ ಜೊತೆ ಸಂಪರ್ಕ ಬೆಳೆಸುವ ವ್ಯಕ್ತಿ ಕೂಡ ಬೇಗ ಸಾವನ್ನಪ್ಪುತ್ತಾನೆ.
ತಲೆಗೆ ಎಣ್ಣೆ ಹಾಕಿದ ನಂತ್ರ ಅದೇ ಕೈನಲ್ಲಿ ಬೇರೆ ಅಂಗಗಳನ್ನು ಸ್ಪರ್ಶಿಸಬಾರದು.
ಮನೆಯಿಂದ ಹೊರಗೆ ಹೋಗುವಾಗ ಬಾಯನ್ನು ಸ್ವಚ್ಛವಾಗಿ ತೊಳೆದುಕೊಂಡು ಹೋಗಬೇಕು.