ಹಸ್ತ, ಮುಂಗೈನಲ್ಲಿ ನಮ್ಮ ಭವಿಷ್ಯ ಅಡಗಿದೆ. ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಇದ್ರ ಬಗ್ಗೆ ಸಂಪೂರ್ಣ ವಿವರ ನೀಡಲಾಗಿದೆ. ಬೇರೆ ಬೇರೆ ಕಾಲುಗಳು ಕೂಡ ವ್ಯಕ್ತಿಯ ಬಗ್ಗೆ ಬೇರೆ ಬೇರೆ ವಿಷ್ಯವನ್ನು ಹೇಳುತ್ತದೆ. ಪಾದಗಳನ್ನು ತೊಳೆಯುವುದ್ರಿಂದಲೂ ಸಾಕಷ್ಟು ಲಾಭವಿದೆ. ಕೆಲವೊಂದು ಕೆಲಸಗಳನ್ನು ಮಾಡುವಾಗ ಕಾಲುಗಳನ್ನು ತೊಳೆದ್ರೆ ಉತ್ತಮ ಫಲಿತಾಂಶ ಪ್ರಾಪ್ತಿಯಾಗಲಿದೆ.
ಹೊರಗಿನಿಂದ ಬಂದ ವ್ಯಕ್ತಿಗಳು ಅವಶ್ಯವಾಗಿ ಕಾಲುಗಳನ್ನು ತೊಳೆಯಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೊರಗಿನಿಂದ ಬಂದ ನಂತ್ರ ಕಾಲುಗಳನ್ನು ತೊಳೆಯುವುದ್ರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ.
ವಿಜ್ಞಾನ ಕೂಡ ಹೊರಗಿನಿಂದ ಮನೆಗೆ ಬಂದ ನಂತ್ರ ಕಾಲುಗಳನ್ನು ತೊಳೆಯಬೇಕೆಂದು ಸಲಹೆ ನೀಡುತ್ತದೆ. ಕಾಲುಗಳಿಗೆ ಕೆಸರು, ಧೂಳು ಸೇರಿಕೊಂಡಿರುತ್ತದೆ. ಅದು ಮನೆಯೊಳಗೆ ಹರಡಿ ಬೇರೆ ಬೇರೆ ರೋಗಗಳಿಗೆ ಕಾರಣವಾಗುತ್ತದೆ.
ಪೂಜೆ ಪವಿತ್ರತೆಗೆ ಸಂಬಂಧಿಸಿದೆ. ಶುದ್ಧ ಮನಸ್ಸು ಹಾಗೂ ಸ್ವಚ್ಛ ದೇಹದೊಂದಿಗೆ ದೇವರಿಗೆ ಪೂಜೆ ಮಾಡಬೇಕು. ಒಳ್ಳೆಯ ಜೀವನಕ್ಕಾಗಿ ಪ್ರಾರ್ಥನೆ ಮಾಡಬೇಕು. ಪೂಜೆಗಿಂತ ಮೊದಲು ಕಾಲು ತೊಳೆಯುವುದ್ರಿಂದ ಏಕಾಗ್ರತೆ ಹೆಚ್ಚಾಗುವ ಜೊತೆಗೆ ಬೇಗ ಪರಿಣಾಮ ಕಾಣಬಹುದಾಗಿದೆ.
ಯೋಗ ಮಾಡುವ ಮೊದಲು ಕಾಲು ತೊಳೆಯುವುದನ್ನು ಮರೆಯದಿರಿ. ಯೋಗ ಮನಸ್ಸು ಹಾಗೂ ಶರೀರಕ್ಕೆ ಸಂಬಂಧಿಸಿದೆ. ಸಕಾರಾತ್ಮಕ ಚಿಂತನೆ ವೃದ್ಧಿಯಾಗಿ ಶಕ್ತಿ ಪ್ರಾಪ್ತವಾಗುತ್ತದೆ.
ರಾತ್ರಿ ಹಾಸಿಗೆಗೆ ಹೋಗುವ ಮೊದಲು ಕಾಲು ತೊಳೆಯಬೇಕು. ಕಾಲು ತೊಳೆಯುವುದ್ರಿಂದ ಶರೀರದಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದ್ರಿಂದ ಸುಖಕರ ನಿದ್ರೆ ನಿಮ್ಮದಾಗುತ್ತದೆ. ಕೆಟ್ಟ ಕನಸು ಕೂಡ ಬೀಳುವುದಿಲ್ಲ.