ದೇಹವು ಆರೋಗ್ಯವಾಗಿರಲು ಎಲ್ಲರೂ ಪ್ರತಿದಿನ ಆಹಾರವನ್ನು ಸೇವಿಸುತ್ತೇವೆ. ಆದರೆ ನಾವು ದೈನಂದಿನ ಸೇವಿಸುವ ಆಹಾರಗಳು ನಮ್ಮ ದೇಹಕ್ಕೆ ಮಾರಕವಾಗಬಹುದು. ಅದು ಯಾವ ಆಹಾರಗಳು ಎಂಬುದನ್ನು ತಿಳಿದುಕೊಳ್ಳಿ.
- ಚೆರಿ ಬೀಜಗಳು : ಚೆರಿ ಇದು ದೇಹಕ್ಕ ಉತ್ತಮ ನಿಜ. ಆದರೆ ಇದರ ಬೀಜದಲ್ಲಿರುವ ಆಮ್ಲ ವಿಷಕಾರಿಯಾಗಿದೆ. ಇದು ದೇಹದ ಆರೋಗ್ಯವನ್ನು ಹಾಳು ಮಾಡುತ್ತದೆ.
2. ಆಪಲ್ ಬೀಜಗಳು : ಸೇಬು ಹಣ್ಣು ಆರೋಗ್ಯಕ್ಕೆ ಉತ್ತಮವೆಂದು ಸೇವಿಸುತ್ತೇವೆ. ಆದರೆ ಇದರ ಬೀಜದಲ್ಲಿ ಸೈನೈಡ್ ಇದ್ದು, ಇದು ದೇಹಕ್ಕೆ ಹಾನಿಕಾರಕವಾಗಿದೆ.
3. ಜಾಯಿಕಾಯಿ : ಜಾಯಿ ಕಾಯಿಯನ್ನು ಅತಿಯಾಗಿ ತಿನ್ನಬಾರದು. ಯಾಕೆಂದರೆ ಇದರಲ್ಲಿರುವ ಪೋಷಕಾಂಶ ತಲೆ ತಿರುಗುವಿಕೆ, ಆಲಸ್ಯ ಇತ್ಯಾದಿಗೆ ಕಾರಣವಾಗಬಹುದು.
4. ಹಸಿರು ಆಲೂಗಡ್ಡೆ : ಹಸಿರು ಅಥವಾ ಮೊಳಕೆಯೊಡೆದ ಆಲೂಗಡ್ಡೆಯಲ್ಲಿ ಗ್ಲೈಕೋಸೈಡ್ ಎಂಬ ವಿಷಕಾರಿ ವಸ್ತು ಇರುತ್ತದೆ. ಅದು ವಾಕರಿಕೆ, ಅತಿಸಾರ ಮತ್ತು ತಲೆನೋವಿನಂತಹ ಸಮಸ್ಯೆಯನ್ನು ಉಂಟುಮಾಡುತ್ತದೆ.
5. ಕಚ್ಚಾ ಮಾವು ಮತ್ತು ಹಸಿ ಬೀನ್ಸ್ : ಕಚ್ಚಾ ಮಾವಿನ ಸಿಪ್ಪೆ ವಿಷವನ್ನು ಹೊಂದಿರುತ್ತದೆ. ಇದು ಅಲರ್ಜಿಯನ್ನುಂಟುಮಾಡುತ್ತದೆ. ಹಾಗೇ ಕಚ್ಚಾ ಬೀನ್ಸ್ ನ್ನು ತಿಂದರೆ ಅದರಲ್ಲಿರುವ ಅಂಶದಿಂದ ವಾಂತಿ ಶುರುವಾಗುತ್ತದೆ.
6.ಕಹಿ ಬಾದಾಮಿ : ಬಾದಾಮಿ ಕಹಿ ಇರುವುದನ್ನು ಸೇವಿಸಿದರೆ ಅದರಲ್ಲಿರುವ ರಾಸಾಯನಿಕ ಹೊಟ್ಟೆನೋವು, ವಾಂತಿ, ಅತಿಸಾರಕ್ಕೆ ಕಾರಣವಾಗುತ್ತದೆ.