ಹೇರ್ ಕಂಡಿಷನರ್ ಬಳಸುವ ಮುಖ್ಯ ಉದ್ದೇಶ ಕೂದಲನ್ನು ಸಾಫ್ಟ್ ಮತ್ತು ಶೈನಿಂಗ್ ಆಗುವಂತೆ ಮಾಡುವುದು. ಇವುಗಳನ್ನು ಬಳಸಿ ಹಲವು ಕೆಲಸಗಳನ್ನು ಮಾಡಿಕೊಳ್ಳಬಹುದು. ಅದ್ಯಾವುದು ಗೊತ್ತೇ?
ಮುಖದ ಅಲಂಕಾರ ತೆಗೆಯುವುದು ಸುಲಭದ ಕೆಲಸವಲ್ಲ. ಕಣ್ಣುಗಳಿಗೆ ಹಚ್ಚಿರುವ ಮೇಕಪ್ ತೆಗೆಯುವುದಂತೂ ಬಲು ಕಷ್ಟಕರ ಕೆಲಸ. ಇದಕ್ಕೆ ಬೆಸ್ಟ್ ಸಲ್ಯೂಷನ್ ಕಂಡಿಷನರ್. ಮೇಕಪ್ ರಿಮೂವಿಂಗ್ ಪ್ಯಾಡ್ ಗೆ ಕೆಲವು ಹನಿ ಕಂಡಿಷನರ್ ಹಾಕಿ ಕಣ್ಣಿನ ಕೆಳಗೆ ಹಾಗೂ ರೆಪ್ಪೆಗಳ ಮೇಲೆ ಉಜ್ಜಿ.
ನಿಮ್ಮ ಮೇಕಪ್ ಸಂಪೂರ್ಣವಾಗಿ ಹೋಗುವುದಲ್ಲದೆ ಕಣ್ಣುಗಳಿಗೆ ಕಿರಿಕಿರಿಯೂ ಆಗುವುದಿಲ್ಲ. ಕೈಗೆ ಹಾಕಿದ ಉಂಗುರ ಅಲ್ಲೇ ಟೈಟಾಗಿದೆಯೇ. ತೆಗೆಯಲು ಸಾಧ್ಯವಾಗುತ್ತಿಲ್ಲವೇ, ಹಾಗಿದ್ದರೆ ಅದರ ಕೆಳಭಾಗದ ಚರ್ಮಕ್ಕೆ ತುಸು ಕಂಡೀಷನರ್ ಹಾಕಿ ಉಜ್ಜಿ. ಉಂಗುರವನ್ನು ಹಿಂದೆ ಮುಂದೆ ತಿರುಗಿಸಿ. ಸುಲಭವಾಗಿ ಉಂಗುರ ಹೊರಬರುತ್ತದೆ.
ಕೆಲವೊಮ್ಮೆ ಜಿಪ್ ಗಳು ಟೈಟಾಗಿ ಮೇಲೆ ಕೆಳಗೆ ಹೋಗಲು ಕೇಳುವುದಿಲ್ಲ. ಅವುಗಳಿಗೂ ಅಷ್ಟೇ ತುಸು ಕಂಡೀಷನರ್ ಹಾಕಿ ಮೇಲೆ ಕೆಳಗೆ ಎಳೆಯಿರಿ. ಅಡುಗೆ ಮನೆಯಲ್ಲಿ ಚಾಕು, ಕತ್ತರಿ ತುಕ್ಕು ಹಿಡಿದಿದ್ದರೆ ಆಗಾಗ ಇವುಗಳಿಗೆ ಕಂಡಿಷನರ್ ಲೇಪಿಸಿ. ಇದರಿಂದ ತುಕ್ಕು ಹಿಡಿಯುವುದಿಲ್ಲ.