ವೀಕೆಂಡ್‌ನಲ್ಲಿ ರೆಸ್ಟೋರೆಂಟ್ ಅಥವಾ ಹೋಟೆಲ್‌ಗೆ ಭೇಟಿ ನೀಡುವುದು ಕಾಮನ್. ಸಾಮಾನ್ಯವಾಗಿ ಪ್ರತಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲೂ ಊಟದ ಟೇಬಲ್ ಮೇಲೆ ಕೊನೆಯಲ್ಲಿ ಸೋಂಪು ಮತ್ತು ಸಕ್ಕರೆಯ ಬೌಲ್ ಇಡುತ್ತಾರೆ. ಇದ್ಯಾಕೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ‘ಟಿಪ್’ ನೀಡಲು ಸೋಂಪಿನ ಬೌಲ್ ಇರಿಸಿರಬಹುದು ಎಂದುಕೊಂಡಿದ್ದರೆ ನಿಮ್ಮ ಲೆಕ್ಕಾಚಾರ ತಪ್ಪು.
ಊಟ ಮಾಡಿದ ನಂತರ ಬಾಯಿ ಫ್ರೆಶ್ ಆಗಲು ಸೋಂಪು ಮತ್ತು ಸಕ್ಕರೆ ಇಡಲಾಗುತ್ತದೆ ಎಂದು ಕೆಲವರು ನಂಬುತ್ತಾರೆ. ಈ ಬಗ್ಗೆ ವಿಭಿನ್ನ ಜನರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಈ ರೀತಿ ಮಾಡುವುದರ ಹಿಂದಿನ ನಿಖರವಾದ ಕಾರಣ ಏನು ಎಂದು ತಿಳಿಯೋಣ. ವಾಸ್ತವವಾಗಿ ಸಕ್ಕರೆ ಕ್ಯಾಂಡಿ ಹರಳಾಗಿಸಿದ ಸಕ್ಕರೆಗಿಂತ ಹೆಚ್ಚು ಹಗುರವಾಗಿರುತ್ತದೆ.
ಸಾಮಾನ್ಯ ಸಕ್ಕರೆಗೆ ಹೋಲಿಸಿದರೆ ಇದರಲ್ಲಿರುವ ಸಿಹಿಯೂ ಕಡಿಮೆ. ಇದು ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಕೆಲಸ ಮಾಡುತ್ತದೆ. ಸೋಂಪು ಮತ್ತು ಸಕ್ಕರೆ ಮಿಶ್ರಣ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲವಾಗಿರಿಸುತ್ತದೆ. ಇವೆರಡನ್ನೂ ಒಟ್ಟಿಗೆ ತಿನ್ನುವುದು ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಫೈಬರ್, ವಿಟಮಿನ್ಗಳು ಮತ್ತು ಕ್ಯಾಲ್ಸಿಯಂ ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳು ಸೋಂಪಿನಲ್ಲಿ ಕಂಡುಬರುತ್ತವೆ.
ಇದಲ್ಲದೇ ಹಲವಾರು ಔಷಧೀಯ ಗುಣಗಳೂ ಇದರಲ್ಲಿವೆ. ಆಹಾರ ಸೇವಿಸಿದ ನಂತರ ಇದನ್ನು ತಿಂದರೆ ಜೀರ್ಣಕ್ರಿಯೆ ವೇಗವಾಗುತ್ತದೆ. ರಕ್ತಹೀನತೆಯನ್ನೂ ಇದು ನಿವಾರಿಸುತ್ತದೆ. ಸೋಂಪು ಮತ್ತು ಸಕ್ಕರೆ ಮಿಠಾಯಿಗಳ ಸಂಯೋಜನೆಯು ದೇಹದಲ್ಲಿ ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ. ಆಹಾರವನ್ನು ಸೇವಿಸಿದ ನಂತರ ಅದನ್ನು ತಿನ್ನುವುದರಿಂದ, ಹಿಮೋಗ್ಲೋಬಿನ್ ಮಟ್ಟವು ಸರಿಯಾಗಿರುತ್ತದೆ.
ರೋಗನಿರೋಧಕ ವ್ಯವಸ್ಥೆಯು ದುರ್ಬಲವಾಗಿದ್ದರೆ ಸೋಂಪು ಮತ್ತು ಸಕ್ಕರೆ ಕ್ಯಾಂಡಿಯ ಈ ಆರೋಗ್ಯಕರ ಸಂಯೋಜನೆ ನಿಮಗೆ ಸುಲಭವಾದ ಆಯ್ಕೆಯಾಗಿದೆ. ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಉತ್ತಮವಾಗಿರುತ್ತದೆ. ಬಾಯಿಯ ದುರ್ವಾಸನೆ ಹೋಗಲಾಡಿಸಲು ಕೂಡ ಇದು ಸಹಕಾರಿ. ಸೋಂಪು ಮತ್ತು ಸಕ್ಕರೆ ಮಿಠಾಯಿ ಒಟ್ಟಿಗೆ ‘ಮೌತ್ ಫ್ರೆಶ್ನರ್’ ಆಗಿ ಕೆಲಸ ಮಾಡುತ್ತದೆ. ಇದನ್ನು ತಿಂದ ನಂತರ ಬಾಯಿಯಿಂದ ಬರುವ ವಾಸನೆ ದೂರವಾಗುತ್ತದೆ.