alex Certify ಈ ಕಾಯಿಲೆ ಇರುವವರು ಅಪ್ಪಿತಪ್ಪಿಯೂ ಬೆಳ್ಳುಳ್ಳಿ ತಿನ್ನಬಾರದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾಯಿಲೆ ಇರುವವರು ಅಪ್ಪಿತಪ್ಪಿಯೂ ಬೆಳ್ಳುಳ್ಳಿ ತಿನ್ನಬಾರದು

ಭಾರತೀಯ ಅಡುಗೆ ಮನೆಯನ್ನು ಆಯುರ್ವೇದ ಔಷಧಿಗಳ ತವರು ಎಂದು ಕರೆಯಲಾಗುತ್ತದೆ. ಯಾಕಂದ್ರೆ ಬಹುತೇಕ ಎಲ್ಲಾ ಕಾಯಿಲೆಗಳಿಗೆ ಅರ್ಧದಷ್ಟು ಔಷಧಿಗಳು ಅಡುಗೆಮನೆಯಲ್ಲೇ ಲಭ್ಯವಿದೆ. ಅಂತಹ ಪರಿಣಾಮಕಾರಿ ಮನೆಮದ್ದುಗಳಲ್ಲೊಂದು ಬೆಳ್ಳುಳ್ಳಿ. ಬೆಳ್ಳುಳ್ಳಿ ಒಂದು ಮೂಲಿಕೆಯಾಗಿದ್ದು ಅದು ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಆಹಾರವಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ದೊಡ್ಡ ರೋಗಗಳನ್ನೂ ಗುಣಪಡಿಸುವ ಸಾಮರ್ಥ್ಯ ಇದಕ್ಕಿದೆ ಎಂಬುದು ಹಲವು ಸಂಶೋಧನೆಗಳಲ್ಲಿ ದೃಢಪಟ್ಟಿದೆ.

ಆಯುರ್ವೇದದ ಅನೇಕ ಚಿಕಿತ್ಸೆಗಳಲ್ಲಿ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಇಷ್ಟೆಲ್ಲಾ ಪ್ರಯೋಜನಕಾರಿಯಾಗಿದ್ದರೂ ಕೆಲವರಿಗೆ ಬೆಳ್ಳುಳ್ಳಿ ಹಾನಿಕಾರಕವಾಗಿದೆ. ಕೆಲವೊಂದು ಕಾಯಿಲೆ ಮತ್ತು ಆರೋಗ್ಯ ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ಸೇವನೆ ಮಾಡಬಾರದು.

ಸಕ್ಕರೆ ಕಾಯಿಲೆ : ಮಧುಮೇಹ ರೋಗಿಗಳು ಬೆಳ್ಳುಳ್ಳಿಯನ್ನು ಅತಿಯಾಗಿ ತಿನ್ನಬಾರದು. ಇದರಿಂದ ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗುತ್ತದೆ, ಇದು ಮತ್ತಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು. ಬೆಳ್ಳುಳ್ಳಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ, ಅದು ಸಕ್ಕರೆಯನ್ನು ನಿಯಂತ್ರಿಸುತ್ತದೆ.

ಲಿವರ್‌ ಸಮಸ್ಯೆ : ಯಕೃತ್ತು, ಕರುಳು ಅಥವಾ ಹೊಟ್ಟೆಯ ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ಸೇವಿಸಬಾರದು. ಬೆಳ್ಳುಳ್ಳೀ ಸೇವನೆಯಿಂದ ಕರುಳಿನಲ್ಲಿ ಗಾಯಗಳಾಗಬಹುದು. ನಿಮ್ಮ ಯಕೃತ್ತು ಬೆಳ್ಳುಳ್ಳಿಯಲ್ಲಿರುವ ಕೆಲವು ಅಂಶಗಳಿಗೆ  ಪ್ರತಿಕ್ರಿಯಿಸುತ್ತದೆ. ಅದನ್ನು ಗುಣಪಡಿಸಲು ಔಷಧ ಸೇವನೆ ಮಾಡಬೇಕಾಗಿ ಬರಬಹುದು.

ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾದವರು: ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾದವರು ಬೆಳ್ಳುಳ್ಳಿಯನ್ನು ಸೇವಿಸುವುದನ್ನು ತಪ್ಪಿಸಬೇಕು. ಬೆಳ್ಳುಳ್ಳಿ, ರಕ್ತವನ್ನು ತೆಳ್ಳಗೆ ಮಾಡುತ್ತದೆ. ಆದ್ದರಿಂದ ಆಪರೇಷನ್ ಆದವರು ಬೆಳ್ಳುಳ್ಳಿ ಹಸಿಯಾಗಿರುವ ಗಾಯದಿಂದ ರಕ್ತಸ್ರಾವವಾಗುವ ಸಾಧ್ಯತೆಯಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...