ಸಾಮಾನ್ಯವಾಗಿ ಎಲ್ಲರೂ ಎಳನೀರನ್ನು ಇಷ್ಟಪಡ್ತಾರೆ. ರಜಾದಿನಗಳನ್ನು ಕಳೆಯಲು ಸಮುದ್ರ ತೀರಕ್ಕೆ ಭೇಟಿ ಕೊಟ್ಟಾಗ ಈ ನೈಸರ್ಗಿಕ ಪಾನೀಯವನ್ನು ತಪ್ಪದೇ ಕುಡಿಯುತ್ತಾರೆ. ಎಳನೀರು ದೇಹದ ನೀರಿನ ಕೊರತೆಯನ್ನು ನೀಗಿಸಿ ನಿರ್ಜಲೀಕರಣವನ್ನು ತಡೆಯುತ್ತದೆ. ನಗರದಿಂದ ಹಿಡಿದು ಗ್ರಾಮೀಣ ಭಾಗದವರೆಗೂ ಇದಕ್ಕೆ ಉತ್ತಮ ಬೇಡಿಕೆ ಇದೆ.
ಎಳನೀರಿನ ಪ್ರಯೋಜನಗಳಂತೂ ಅಪಾರ. ಕೆಲವೊಂದು ನಿರ್ದಿಷ್ಟ ಕಾಯಿಲೆ ಮತ್ತು ಆರೋಗ್ಯ ಸಮಸ್ಯೆ ಇರುವವರು ಇದನ್ನು ತಪ್ಪದೇ ಕುಡಿಯಬೇಕು.
ಬೊಜ್ಜು: ಸ್ಥೂಲಕಾಯತೆ ರೋಗವಲ್ಲ, ಆದರೆ ಇದು ಹಲವಾರು ರೋಗಗಳನ್ನು ಆಹ್ವಾನಿಸುತ್ತದೆ. ಆದ್ದರಿಂದ ತೂಕವನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಎಳನೀರನ್ನು ಕುಡಿಯಿರಿ. ನಿಯಮಿತವಾಗಿ ಎಳನೀರು ಕುಡಿಯುವುದರಿಂದ ದೇಹದ ಬೊಜ್ಜು ಕಡಿಮೆಯಾಗುತ್ತದೆ.
ತೀವ್ರ ರಕ್ತದೊತ್ತಡ: ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಎಳನೀರನ್ನು ಪ್ರತಿದಿನ ಕುಡಿಯಬೇಕು. ಏಕೆಂದರೆ ಅದು ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಕ್ರಮೇಣ ಬಿಪಿ ಕೂಡ ಸಾಮಾನ್ಯ ಸ್ಥಿತಿಗೆ ಬರುತ್ತದೆ.
ಹೃದಯದ ರೋಗಗಳು: ಭಾರತದಲ್ಲಿ ಹೃದ್ರೋಗದಿಂದ ಬಳಲುತ್ತಿರುವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಎಳನೀರನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಹೃದಯಾಘಾತ, ಪಾರ್ಶ್ವವಾಯು, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ನಾಳದ ಕಾಯಿಲೆಯ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ.
ಸೋಂಕು: ಯಾವುದೇ ರೀತಿಯ ವೈರಸ್ ಅಥವಾ ಬ್ಯಾಕ್ಟೀರಿಯಾ ಸೋಂಕಿನಿಂದ ಪಾರಾಗಲು ನಿಯಮಿತವಾಗಿ ಎಳನೀರು ಕುಡಿಯಬೇಕು. ಅದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೋಂಕು ಮತ್ತು ಕಾಯಿಲೆಗಳ ವಿರುದ್ಧ ಹೋರಾಡಲು ಶಕ್ತಿ ತುಂಬುತ್ತದೆ.