ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚಿನ ಗಮನ ನೀಡ್ತಾರೆ. ಹಣ್ಣು-ಹಾಲು ಮಕ್ಕಳ ಆರೋಗ್ಯ ವೃದ್ಧಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ನಾವು ಮಕ್ಕಳಿಗೆ ಕೊಡುವ ಹಣ್ಣು-ಹಾಲು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ ಯಾವ ಹಣ್ಣಿನ ಜೊತೆ ಇನ್ನೊಂದು ಹಣ್ಣು ಅಥವಾ ಹಾಲನ್ನು ನೀಡಬಾರದು ಎನ್ನುವ ಬಗ್ಗೆ ಪ್ರತಿಯೊಬ್ಬ ಪಾಲಕರು ಅಗತ್ಯವಾಗಿ ತಿಳಿದಿರಬೇಕು.
ಕಿತ್ತಳೆ ಹಣ್ಣು-ಹಾಲು: ಕಿತ್ತಳೆ ಹುಳಿ ಹಣ್ಣು. ಈ ಹಣ್ಣಿನ ಜೊತೆ ಹಾಲನ್ನು ನೀಡುವುದು ಅಪಾಯಕಾರಿ. ಕಿತ್ತಳೆ ಹಣ್ಣು ನೀಡಿದ ಎರಡರಿಂದ ಮೂರು ಗಂಟೆ ನಂತ್ರ ಹಾಲನ್ನು ಮಕ್ಕಳಿಗೆ ಕುಡಿಸಬೇಕು.
ಪಪ್ಪಾಯಿ-ನಿಂಬೆ : ಪಪ್ಪಾಯಿ ಹಾಗೂ ನಿಂಬೆ ಹಣ್ಣನ್ನು ಒಟ್ಟಿಗೆ ಸೇವನೆ ಮಾಡುವುದರಿಂದ ರಕ್ತಹೀನತೆ ಹಾಗೂ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಕಾಂಬಿನೇಷನ್ ನಲ್ಲಿ ಎಂದೂ ಮಕ್ಕಳಿಗೆ ಹಣ್ಣು ನೀಡಬೇಡಿ.
ಸೀಬೆಕಾಯಿ-ಬಾಳೆಹಣ್ಣು: ಈ ಎರಡೂ ಹಣ್ಣನ್ನು ಒಟ್ಟಿಗೆ ತಿನ್ನುವುದರಿಂದ ಗ್ಯಾಸ್, ಎಸಿಡಿಟಿ ಸಮಸ್ಯೆ ಕಾಡುತ್ತದೆ. ಹೊಟ್ಟೆ ನೋವು ಹಾಗೂ ತಲೆನೋವು ಬರುವ ಸಾಧ್ಯತೆಯೂ ಇದೆ.
ಕಿತ್ತಳೆ-ಕ್ಯಾರೆಟ್ : ಕಿತ್ತಳೆ ಹಣ್ಣು ಹಾಗೂ ಕ್ಯಾರೆಟ್ ಒಟ್ಟಿಗೆ ತಿನ್ನುವುದು ಹೃದಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ತರಕಾರಿ-ಹಣ್ಣು : ಹಣ್ಣು ಹಾಗೂ ತರಕಾರಿಯನ್ನು ಒಂದೇ ಸಮಯದಲ್ಲಿ ತಿನ್ನುವುದು ಸೂಕ್ತವಲ್ಲ. ಇದ್ರಿಂದ ಹೊಟ್ಟೆ ನೋವು ಹಾಗೂ ತಲೆ ನೋವಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಕೇವಲ ಹಣ್ಣುಗಳನ್ನು ಮಿಕ್ಸ್ ಮಾಡಿ ಮಾತ್ರ ಸಲಾಡ್ ಮಾಡಿ. ಇಲ್ಲ ತರಕಾರಿಯನ್ನು ಮಾತ್ರ ಸಲಾಡ್ ಗೆ ಬಳಸಿ.
ಅನಾನಸ್ –ಹಾಲು : ಅನಾನಸ್ ಹಾಗೂ ಹಾಲನ್ನು ಒಂದೇ ಬಾರಿ ಸೇವನೆ ಮಾಡುವುದರಿಂದ ದೇಹದಲ್ಲಿ ಹಾನಿಕಾರಕ ಟಾಕ್ಸಿನ್ ಉತ್ಪತ್ತಿಯಾಗುತ್ತದೆ. ಇದು ಅತಿಸಾರಕ್ಕೆ ಕಾರಣವಾಗುತ್ತದೆ.