alex Certify ಈ ಕಷಾಯ ಕುಡಿದು – ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಷಾಯ ಕುಡಿದು – ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಜನರು ಸಾಕಷ್ಟು ಮನೆ ಮದ್ದುಗಳ ಮೊರೆ ಹೋಗುತ್ತಿದ್ದಾರೆ.

ಇಲ್ಲಿ ಸುಲಭವಾಗಿ ಮಾಡಬಹುದಾದ ಒಂದು ಕಷಾಯವಿದೆ ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಚೆನ್ನಾಗಿ ಹೆಚ್ಚಿಸುತ್ತದೆ.

5 – ಗರಿಕೆ ಹುಲ್ಲು, 5 – ದೊಡ್ಡಪತ್ರೆ ಎಲೆ, ನೆಲನೆಲ್ಲಿ – 4 ಎಲೆ, ಪಾರಿಜಾತ ಎಲೆ – 3, ತುಳಸಿ – 10 ಎಲೆ. 2 ಎಲಕ್ಕಿ, 4 – ಲವಂಗ, ಸಣ್ಣ ಪೀಸ್ ಚಕ್ಕೆ, 6 – ಕಾಳುಮೆಣಸು, ಒಣಶುಂಠಿ – ಸಣ್ಣತುಂಡು, 1 ಚಮಚ – ಜೀರಿಗೆ, 1 ಚಮಚ – ಧನಿಯಾ. ಸೋಂಪು – ಚಿಟಿಕೆ.

ಮೊದಲಿಗೆ ಎಲೆಗಳನ್ನೆಲ್ಲಾ ಚೆನ್ನಾಗಿ ತೊಳೆದು ಎತ್ತಿಟ್ಟುಕೊಳ್ಳಿ. ನಂತರ ಉಳಿದ ಸಾಮಾಗ್ರಿಗಳನ್ನು ಒಂದು ಕಲ್ಲಿಗೆ ಹಾಕಿ ಚೆನ್ನಾಗಿ ಕುಟ್ಟಿಕೊಳ್ಳಿ.

ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 1 ಗ್ಲಾಸ್ ನೀರು ಹಾಕಿ ಅದು ಬಿಸಿಯಾಗುತ್ತಲೇ ಅರಿಶಿನ ಹಾಕಿ ನಂತರ ಗರಿಕೆ, ಪಾರಿಜಾತ, ದೊಡ್ಡಪತ್ರೆ ಎಲೆ, ನೆಲನೆಲ್ಲಿ, ತುಳಸಿ ಹಾಕಿ ಕುದಿಸಿ ನಂತರ ಕುಟ್ಟಿಕೊಂಡ ಪುಡಿ ಹಾಕಿ ಅರ್ಧ ಲಿಂಬೆಹಣ್ಣನ್ನು ಹಾಕಿ ಇದು ಚೆನ್ನಾಗಿ ಕುದಿಯಲಿ. ನಂತರ ಬೆಲ್ಲ ಸೇರಿಸಿ. 1 ಗ್ಲಾಸ್ ನೀರು ಅರ್ಧ ಗ್ಲಾಸ್ ಆಗುವವರೆಗೆ ಕುದಿಸಿ ಗ್ಯಾಸ್ ಆಫ್ ಮಾಡಿ. ಇದನ್ನು ಬೆಳಿಗ್ಗೆ ಮತ್ತು ಸಂಜೆ ಸಮಯ ಕುಡಿಯಿರಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...