ಎಲ್ಲರಿಗೂ ಇಷ್ಟವಾಗುವ ಹಣ್ಣು ದಾಳಿಂಬೆ. ರಕ್ತ ಹೀನತೆಯ ಸಮಸ್ಯೆ ಇರುವವರು ಈ ದಾಳಿಂಬೆ ಹಣ್ಣನ್ನು ಹೆಚ್ಚಾಗಿ ಸೇವನೆ ಮಾಡಬೇಕೆಂದು ವೈದ್ಯರೂ ಸಲಹೆ ನೀಡುತ್ತಾರೆ. ಹಣ್ಣನ್ನು ಹಾಗೆ ತಿನ್ನಬಹುದು. ಇಲ್ಲ ಜ್ಯೂಸ್ ಮಾಡಿ ಸೇವನೆ ಮಾಡಬಹುದು. ರಕ್ತಹೀನತೆ ಸಮಸ್ಯೆ ನಿವಾರಿಸುವ ಜೊತೆಗೆ ಅನೇಕ ರೋಗಗಳನ್ನು ಕಡಿಮೆ ಮಾಡುವ ಶಕ್ತಿ ಈ ದಾಳಿಂಬೆ ಹಣ್ಣಿಗಿದೆ.
ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ರಕ್ತ ಸಂಚಾರ ಸುಲಭವಾಗುತ್ತದೆ.
ಕಬ್ಬಿಣದ ಕೊರತೆಯನ್ನು ದೂರ ಮಾಡಿ ಎನಿಮಿಯಾದಿಂದ ನಮ್ಮನ್ನು ರಕ್ಷಿಸುತ್ತದೆ.
ದಾಳಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ, ಇ, ಎ ಹಾಗೂ ಫೋಲಿಕ್ ಆಮ್ಲವಿರುತ್ತದೆ.
ದಾಳಿಂಬೆ ರಕ್ತ ಶುದ್ಧಗೊಳಿಸುವ ಕೆಲಸವನ್ನೂ ಮಾಡುತ್ತದೆ.
ಅಜೀರ್ಣ ಸಮಸ್ಯೆ ದಾಳಿಂಬೆ ಹಣ್ಣಿನಿಂದ ಕಡಿಮೆಯಾಗುತ್ತದೆ.
ದಾಳಿಂಬೆ ಹಣ್ಣು ತಿನ್ನುವುದರಿಂದ ಹಲ್ಲಿಗೆ ಸಂಬಂಧಿಸಿದ ಸಮಸ್ಯೆ ಕಾಡುವುದಿಲ್ಲ.
ಹಿರಿಯ ವಯಸ್ಕರನ್ನು ಕಾಡುವ ಆಲ್‌ಝೈಮರ್ ಕಾಯಿಲೆ ಗುಣವಾಗುತ್ತದೆ.
ಗರ್ಭಿಣಿಯರು ದಾಳಿಂಬೆ ಜ್ಯೂಸ್ ಸೇವನೆ ಮಾಡುವುದು ಬಹಳ ಒಳ್ಳೆಯದು.