alex Certify ಈ ಉಪಾಯ ಅನುಸರಿಸಿದ್ರೆ ಮೊಬೈಲ್ ನಲ್ಲಿ ತುಂಬಾ ಸಮಯ ನಿಲ್ಲುತ್ತೆ ಚಾರ್ಜ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಉಪಾಯ ಅನುಸರಿಸಿದ್ರೆ ಮೊಬೈಲ್ ನಲ್ಲಿ ತುಂಬಾ ಸಮಯ ನಿಲ್ಲುತ್ತೆ ಚಾರ್ಜ್​

ನಿಮ್ಮ ಮೊಬೈಲ್​ ಒಳ್ಳೆಯ ರೀತಿಯಲ್ಲಿ ಇಟ್ಟುಕೊಳ್ಳಬೇಕು ಅಂದರೆ ಅದರ ಬ್ಯಾಟರಿ ಬಗ್ಗೆ ಕಾಳಜಿ ವಹಿಸೋದು ತುಂಬಾನೇ ಮುಖ್ಯ. ಬ್ಯಾಟರಿ ಕಾಪಾಡಬೇಕು ಅಂದರೆ ಪದೇ ಪದೇ ಬ್ಯಾಟರಿ ಚಾರ್ಜ್​ ಮಾಡುವ ವಿಧಾನವನ್ನ ಕೈಬಿಡಬೇಕು.

ಇದರಿಂದ ಮೊಬೈಲ್​ ಬ್ಯಾಟರಿ ಹೆಚ್ಚು ಸಮಯದವರೆಗೆ ಬಾಳಿಕೆ ಬರಲಿದೆ. ಹಾಗಾದ್ರೆ ಮೊಬೈಲ್​ ಬ್ಯಾಟರಿಯಲ್ಲಿ ಹೆಚ್ಚು ಕಾಲ ಚಾರ್ಜ್​ ಉಳಿಯಬೇಕು ಅಂದರೆ ಏನು ಮಾಡಬೇಕು ಅನ್ನೋದಕ್ಕೆ ಒಂದಷ್ಟು ಸಲಹೆ ಇಲ್ಲಿದೆ ನೋಡಿ.

ಮೊಬೈಲ್​​ನಲ್ಲಿ ಚಾರ್ಜ್​ ಉಳಿಯುವಂತೆ ಮಾಡಬೇಕು ಅಂದರೆ ನೀವು ಮೊದಲು ಮೊಬೈಲ್​ ಸ್ಕ್ರೀನ್​ ಬ್ರೈಟ್​ನೆಸ್​ನ್ನು ಕಡಿಮೆ ಮಾಡಿ. ಕೇವಲ ಚಾರ್ಜ್​ ವಿಚಾರವಾಗಿ ಮಾತ್ರವಲ್ಲದೇ ನಿಮ್ಮ ಕಣ್ಣಿನ ಆರೋಗ್ಯಕ್ಕೂ ಇದು ಒಳ್ಳೆಯದು.

ಸೆಟ್ಟಿಂಗ್ಸ್ ಗೆ ಹೋಗಿ ಬ್ರೈಟ್​ನೆಸ್​​ನಲ್ಲಿ ಆಟೋಮ್ಯಾಟಿಕ್​ ಎಂಬ ಆಯ್ಕೆಯನ್ನ ಆಯ್ದುಕೊಳ್ಳೋದು ಇನ್ನೂ ಒಳ್ಳೆಯದು.

ಮೊಬೈಲ್​ ಹಾಗೂ ಮೊಬೈಲ್​ನಲ್ಲಿರುವ ಅಪ್ಲಿಕೇಶನ್​ಗಳಲ್ಲಿ ಡಾರ್ಕ್​ ಮೋಡ್​ ಆಯ್ಕೆಯನ್ನ ಸೆಲೆಕ್ಟ್​ ಮಾಡೋದ್ರಿಂದಲೂ ತುಂಬಾನೇ ಉಪಯೋಗವಿದೆ. ಇದರಿಂದಲೂ ನಿಮ್ಮ ಕಣ್ಣಿನ ಆರೋಗ್ಯ ಸುಧಾರಿಸಲಿದೆ. ಅದರಲ್ಲೂ ಮಲಗುವ ವೇಳೆ ಡಾರ್ಕ್​ ಮೋಡ್​ನಲ್ಲೇ ಮೊಬೈಲ್​ ಬಳಕೆ ಮಾಡಿ. ಇದರಿಂದ ನಿಮ್ಮ ಬ್ಯಾಟರಿ ಸಾಮರ್ಥ್ಯ ಹೆಚ್ಚಲಿದೆ.

ಬ್ಲೂಟೂತ್, ವೈಫೈಗಳು ಕೂಡ ಚಾರ್ಜ್​ ಖಾಲಿ ಮಾಡುತ್ತವೆ. ಹೀಗಾಗಿ ಅವಶ್ಯಕತೆ ಇಲ್ಲದ ವೇಳೆಯಲ್ಲಿ ಈ ವೈಫೈ , ಹಾಗೂ ಬ್ಲೂಟೂತ್ ಕನೆಕ್ಷನ್​ಗಳನ್ನ ಬಂದ್​ ಮಾಡಲು ಮರೆಯದಿರಿ.

ಜಿಪಿಎಸ್​ ಕೂಡ ನಿಮ್ಮ ಮೊಬೈಲ್ ಚಾರ್ಜ್​ನ್ನು ಕಡಿಮೆ ಮಾಡಬಲ್ಲವು. ಹೀಗಾಗಿ ವೈಫೈ, ಬ್ಲೂಟೂತ್ಗಳಂತೆಯೇ ಅವಶ್ಯಕತೆ ಇದ್ದಾಗ ಮಾತ್ರ ಜಿಪಿಎಸ್ ಆನ್​ ಮಾಡಿ.

ಈಗಂತೂ ಎಲ್ಲಾ ಮೊಬೈಲ್​ಗಳಲ್ಲೂ ಪವರ್ ಸೇವಿಂಗ್​ ಮೋಡ್​ ಇದ್ದೇ ಇರುತ್ತೆ. ಇದನ್ನ ಆನ್​ ಮಾಡೋದ್ರಿಂದ ಕೂಡ ನಿಮ್ಮ ಬ್ಯಾಟರಿ ಚಾರ್ಜ್​ ಬೇಗನೇ ಕಡಿಮೆಯಾಗೋದಿಲ್ಲ.

ಕೆಲವೊಮ್ಮೆ ನಾವೆಷ್ಟೇ ಪ್ರಯತ್ನ ಮಾಡಿದ್ರೂ ಬ್ಯಾಟರಿಗಳು ಹಾಳಾಗಿ ಬಿಡ್ತವೆ. ಮೊಬೈಲ್​ ಒಳ್ಳೆಯ ಸ್ಥಿತಿಯಲ್ಲೇ ಇದ್ದು ಬ್ಯಾಟರಿ ಮಾತ್ರ ಹಾಳಾಗಿದೆ ಅನ್ನೋ ವಿಚಾರ ನಿಮ್ಮ ಗಮನಕ್ಕೆ ಬಂದಿದ್ರೆ ಸುಮ್ಮನೇ ಹೊಸ ಮೊಬೈಲ್​ಗೆ ಸಿಕ್ಕಾಪಟ್ಟೆ ಹಣವನ್ನ ವ್ಯಯಿಸುವ ಬದಲು ಬ್ಯಾಟರಿಯನ್ನ ಚೇಂಜ್​ ಮಾಡೋದು ಒಳ್ಳೆ ಐಡಿಯಾ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...