ಆಹಾರ ಎಲ್ಲರಿಗೂ ಬೇಕು. ಇದು ಮುಗಿದು ಹೋಗುವಂತಹದ್ದಲ್ಲ. ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಹೊಸ ರುಚಿಯ ಆಹಾರಗಳು ಮಾರುಕಟ್ಟೆಗೆ ಬರ್ತಿವೆ. ಆಹಾರದ ಈ ಬ್ಯುಸಿನೆಸ್ ನಲ್ಲಿ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಗಳಿಸಲು ಒಳ್ಳೆ ಅವಕಾಶವಿದೆ.
ಆನ್ಲೈನ್ ಕ್ಯಾಟರಿಂಗ್ ಸರ್ವೀಸ್ : ಇದ್ರಲ್ಲಿ ನೀವು ಆಹಾರ ತಯಾರಿ ಮಾಡಬೇಕಾಗಿಲ್ಲ. ಆನ್ ಲೈನ್ ಕ್ಯಾಟರಿಂಗ್ ಸರ್ವಿಸ್ ಪ್ರೊವೈಡರ್ ಆಗಿ ಕೆಲಸ ಮಾಡಬಹುದು. ಅಂದ್ರೆ ಸುತ್ತಮುತ್ತಲ ಹೊಟೇಲ್ ಮತ್ತು ಮನೆ ಅಡುಗೆ ಮಾಲೀಕರ ಜೊತೆ ಒಪ್ಪಂದ ಮಾಡಿಕೊಳ್ಳಬೇಕು. ವೆಬ್ ಅಥವಾ ಮೊಬೈಲ್ ಆಪ್ ಸಿದ್ಧಪಡಿಸಬೇಕು. ಆನ್ಲೈನ್ ಮೂಲಕ ಗ್ರಾಹಕರು ಆಹಾರ ಆರ್ಡರ್ ಮಾಡ್ತಾರೆ. ಡೆಲಿವರಿ ಬಾಯ್ ಸಹಾಯದಿಂದ ಗ್ರಾಹಕರ ಮನೆಗೆ ನೀವು ಆಹಾರ ಒದಗಿಸಬೇಕು.
ಖರ್ಚು : ವರದಿ ಪ್ರಕಾರ ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಸಿದ್ಧಪಡಿಸಲು ನಿಮಗೆ ಸುಮಾರು 1.25 ಲಕ್ಷ ರೂಪಾಯಿ ಖರ್ಚಾಗಲಿದೆ. ಇದ್ರ ಜೊತೆಗೆ ಎರಡು ಕಂಪ್ಯೂಟರ್, ನೆಟ್ವರ್ಕ್, ಆಫೀಸ್ ಖುರ್ಚಿ ಸೇರಿದಂತೆ ಸುಮಾರು 2.70 ಲಕ್ಷ ರೂಪಾಯಿ ಖರ್ಚಾಗಲಿದೆ. ಸ್ಥಿರ ಬಂಡವಾಳ 3 ಲಕ್ಷ 95 ಸಾವಿರವಾಗುತ್ತದೆ. ಮೂರು ತಿಂಗಳ ಪ್ರಾಜೆಕ್ಟ್ ರಿಪೋರ್ಟ್ ತಯಾರಿಸಿದ್ರೆ ಅದ್ರ ಪ್ರಕಾರ ನಿಮಗೆ 7 ಲಕ್ಷ 72 ಸಾವಿರ ರೂಪಾಯಿ ಖರ್ಚು ಬರಲಿದೆ.
ಸರ್ಕಾರದಿಂದ ಬೆಂಬಲ : ಯಾವುದೇ ಬ್ಯುಸಿನೆಸ್ ಶುರು ಮಾಡಲು ಸರ್ಕಾರ ನಿಮಗೆ ನೆರವಾಗಲಿದೆ.
ಆದಾಯ : ವರ್ಷದ ಉತ್ಪಾದನಾ ವೆಚ್ಚ ಅಂದಾಜು 16 ಲಕ್ಷ 14 ಸಾವಿರ ರೂಪಾಯಿಯಾಗಲಿದೆ. ಆನ್ಲೈನ್ ವಾರ್ಷಿಕ ವಹಿವಾಟು 26 ಲಕ್ಷ 36 ಸಾವಿರ ರೂಪಾಯಿಯಾಗಲಿದೆ. ಎಲ್ಲ ಖರ್ಚು ಹೋಗಲಾಡಿಸಿ 10 ಲಕ್ಷ 16 ಸಾವಿರ ರೂಪಾಯಿಯಷ್ಟು ಆದಾಯವನ್ನು ನೀವು ನಿರೀಕ್ಷೆ ಮಾಡಬಹುದು.