ಪ್ರತಿ ಮನೆಯಲ್ಲೂ ತೊಗರಿಬೇಳೆಯನ್ನು ನಿಯಮಿತವಾಗಿ ಬಳಸ್ತಾರೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತೊಗರಿಬೇಳೆ ಸೇವನೆಯಿಂದ ದೇಹದಲ್ಲಿ ಪ್ರೋಟೀನ್ ಕೊರತೆ ನೀಗುತ್ತದೆ. ಸ್ನಾಯುಗಳನ್ನು ಇದು ಬಲಪಡಿಸುತ್ತದೆ. ಬೇಳೆಕಾಳುಗಳ ಸೇವನೆಯಿಂದ ಅನೇಕ ರೋಗಗಳಿಂದ ಮುಕ್ತಿಯನ್ನೂ ಪಡೆಯಬಹುದು.
ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಫೋಲಿಕ್ ಆಸಿಡ್, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಅನೇಕ ಪೋಷಕಾಂಶಗಳು ತೊಗರಿಬೇಳೆಯಲ್ಲಿವೆ. ಆರೋಗ್ಯ ತಜ್ಞರ ಪ್ರಕಾರ ಕೆಲವೊಂದು ಕಾಯಿಲೆಗಳಿಂದ ಬಳಲುತ್ತಿರುವವರು ತೊಗರಿಬೇಳೆಯಿಂದ ದೂರವಿರಬೇಕು, ಇಲ್ಲದೇ ಹೋದಲ್ಲಿ ನಿಧಾನ ವಿಷದಂತೆ ಅದು ಕೆಲಸ ಮಾಡುತ್ತದೆ.
ಈ ಸಮಸ್ಯೆ ಇರುವವರು ತೊಗರಿಬೇಳೆ ತಿನ್ನಬೇಡಿ…! ಯೂರಿಕ್ ಆಸಿಡ್ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ತೊಗರಿಬೇಳೆ ಸೇವನೆ ತುಂಬಾ ಅಪಾಯಕಾರಿ. ಅದರಲ್ಲಿರುವ ಪ್ರೋಟೀನ್‌ನಿಂದಾಗಿ ಸಮಸ್ಯೆ ಹೆಚ್ಚಾಗುತ್ತದೆ. ಕೈ ಮತ್ತು ಕಾಲುಗಳಲ್ಲಿ ಊತ ಪ್ರಾರಂಭವಾಗುತ್ತದೆ. ಯೂರಿಕ್ ಆಮ್ಲ ದೇಹದಿಂದ ವಿಷ ತೆಗೆದುಹಾಕಲು ಸಹಕರಿಸುತ್ತದೆ. ಕೆಲವರಿಗೆ ಬೇಳೆಕಾಳುಗಳಿಂದ ಅಲರ್ಜಿ ಇರುತ್ತದೆ. ಜೀರ್ಣಾಂಗ ವ್ಯವಸ್ಥೆಯು ಸ್ವಲ್ಪ ಹೆಚ್ಚು ಸೂಕ್ಷ್ಮವಾಗಿರುತ್ತದೆ.
ಅಂಥವರು ತೊಗರಿಬೇಳೆ ಸೇವಿಸಿದರೆ ಅದು ಜೀರ್ಣವಾಗುವುದಿಲ್ಲ. ಅಜೀರ್ಣದಿಂದ ತೀವ್ರ ಹೊಟ್ಟೆ ನೋವು ಉಂಟಾಗುತ್ತದೆ. ಇಂಥವರು ವಿಶೇಷವಾಗಿ ರಾತ್ರಿ ವೇಳೆ ಬೇಳೆಕಾಳುಗಳನ್ನು ಸೇವಿಸಬಾರದು. ಮೂತ್ರಪಿಂಡಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೆ ತೊಗರಿಬೇಳೆಯಿಂದ ದೂರವಿರಬೇಕು. ಪೊಟ್ಯಾಸಿಯಮ್ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಪರಿಣಾಮ ಮೂತ್ರಪಿಂಡದ ಕಲ್ಲಿನ ಗಾತ್ರವು ಹೆಚ್ಚಾಗಲು ಪ್ರಾರಂಭಿಸುತ್ತದೆ. ನಿರ್ವಿಶೀಕರಣ ಪ್ರಕ್ರಿಯೆಯಲ್ಲೂ ಸಮಸ್ಯೆ ಬರುತ್ತದೆ.