ಈ ಆಪ್ಟಿಕಲ್ ಭ್ರಮೆ ಚಿತ್ರದಲ್ಲಿ ಮಲಗಿರುವ ಬೆಕ್ಕನ್ನು ಗುರುತಿಸುವುದು ಅಷ್ಟು ಸುಲಭವಲ್ಲ….! 11-05-2022 6:32AM IST / No Comments / Posted In: Latest News, Live News, International ಇತ್ತೀಚೆಗೆ ಆಪ್ಟಿಕಲ್ ಭ್ರಮೆಗಳ ಚಿತ್ರಗಳು ಅಂತರ್ಜಾಲದಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿವೆ. ನೆಟ್ಟಿಗರಂತೂ ಕಂಡುಹಿಡಿಯಲು ತಲೆಕೆರೆದುಕೊಳ್ಳುತ್ತಿದ್ದಾರೆ. ಕೆಲವು ಮೆದುಳಿಗೆ ಸಾಕಷ್ಟು ಕೆಲಸ ಕೊಡುವುದರಿಂದ ತುಂಬಾ ಆಸಕ್ತಿದಾಯಕವಾಗಿದ್ದು, ಅವು ಕ್ಷಣಮಾತ್ರದಲ್ಲಿ ವೈರಲ್ ಆಗುತ್ತವೆ. ಇದೀಗ ಲಾಗ್‌ಗಳ ಗುಂಪಿನ ನಡುವೆ ಕಾಡಿನಲ್ಲಿ ಮಲಗಿರುವ ಬೆಕ್ಕನ್ನು ಕಂಡುಹಿಡಿಯುವಂತೆ ಸವಾಲು ಹಾಕಲಾಗಿದೆ. ಈ ಚಿತ್ರವನ್ನು 6 ವರ್ಷಗಳ ಹಿಂದೆ ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ ಮತ್ತೆ ಕಾಣಿಸಿಕೊಂಡಿದ್ದು, ನೆಟ್ಟಿಗರು ಹುಡುಕಾಟದಲ್ಲಿ ಬ್ಯುಸಿಯಾಗಿದ್ದಾರೆ. ವೈರಲ್ ಚಿತ್ರದಲ್ಲಿ ಹಸಿರಿನ ನಡುವೆ ಮರದ ದಿಮ್ಮಿಗಳನ್ನು ಒಳಗೊಂಡಿದೆ. ಚಿತ್ರದಲ್ಲಿ ಎಲ್ಲೋ ಮಲಗಿರುವ ಬೆಕ್ಕನ್ನು ಗುರುತಿಸಲು ಸವಾಲು ಹಾಕಲಾಗಿದೆ. ಆಪ್ಟಿಕಲ್ ಭ್ರಮೆಯನ್ನು 6 ವರ್ಷಗಳ ಹಿಂದೆ ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಮತ್ತೆ ವೈರಲ್ ಆಗಿದೆ. ಚಿತ್ರವು ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ಬಹುತೇಕರು ಇದನ್ನು ತಮಾಷೆಯಾಗಿ ಪರಿಗಣಿಸಿದ್ದಾರೆ. ಒಂದು ವೇಳೆ ನಿಮಗೆ ಬೆಕ್ಕನ್ನು ಗುರುತಿಸಲು ಸಾಧ್ಯವಾಯಿತೇ..? ಇಲ್ಲದಿದ್ದರೆ, ಚಿಂತಿಸಬೇಡಿ, ಸರಿಯಾಗಿ ಗಮನಿಸಿ. ಬೆಕ್ಕು ಮರದ ದಿಮ್ಮಿಯ ಎರಡನೇ ರಾಶಿಯ ಮೇಲೆ ಮಲಗಿದೆ.